ಪುದು: ಕುಂಜತ್ಕಳದಲ್ಲಿ ಕೋವಿಡ್ -19 ವಾರ್ಡ್ ಮಟ್ಟದ ಟಾಸ್ಕ್ ಪೋರ್ಸ್ ಕಾರ್ಯಪಡೆ ಮತ್ತು ಜನ ಜಾಗ್ರತಿ ಸಭೆ

Prasthutha|

ಫರಂಗಿಪೇಟೆ : ವಾರ್ಡ್ ಮಟ್ಟದ ಕೋವಿಡ್ -19 ಟಾಸ್ಕ್ ಪೋರ್ಸ್ ಕಾರ್ಯಪಡೆ ಮತ್ತು ಜನ ಜಾಗ್ರತಿ ಸಭೆ ನೂರುಲ್ ಹುದಾ ಮದರಸ ಕುಂಜತ್ಕಳದಲ್ಲಿ ಶನಿವಾರ ನಡೆಯಿತು.

- Advertisement -

ಸಭೆಯ ಅಧ್ಯಕ್ಷತೆಯನ್ನು ಪುದು ಗ್ರಾಪಂ ಅಧ್ಯಕ್ಷ ರಮ್ಲಾನ್ ವಹಿಸಿದರು, ಸದಸ್ಯರಾದ ನಝೀರ್ ಅಬೂಬಕ್ಕರ್ ಪ್ರಾಸ್ತಾವಿಕ ನುಡಿಗಳೊಂದಿಗೆ ಸ್ವಾಗತಿಸಿದರು. ಪಂಚಾಯತ್ ಅಭಿವೃದ್ಧಿ ಅಧಿಕಾರಿ ಹರೀಶ್ ಕೆ, ಸದಸ್ಯರಾದ  ಬಾಸ್ಕರ್ ರೈ, ಮಾಜಿ ಅಧ್ಯಕ್ಷ ಹನೀಫ್ ಈ ಸಂದರ್ಭದಲ್ಲಿ ಮಾತನಾಡಿದರು.

ಹಾಲಿ ಸದಸ್ಯೆ ಝೀನತ್ ಕರ್ಮಾರ್, ಮಾಜಿ ಸದಸ್ಯ ಇಸ್ಮಾಯಿಲ್, ನಷಾತುದ್ದೀನ್ ಯಂಗ್ ಫೆಡರೇಷನ್ ಉಪಾಧ್ಯಕ್ಷ  ಇಸ್ಮಾಯಿಲ್, ಕಾರ್ಯದರ್ಶಿ ಸಿದ್ದೀಕ್ ಕೆ.ಎಚ್ ಮತ್ತು ಸದಸ್ಯರು, ನೂರುಲ್ ಹುದಾ ಮದರಸ ಕಾರ್ಯದರ್ಶಿ ಆಬಿದ್ ಅಲಿ, ಎಸ್ಡಿಪಿಐ ಘಟಕ ಅಧ್ಯಕ್ಷ ಇಸಾಕ್ ಹಾಗೂ ತ್ವಾಹಾ ಜುಮ್ಮಾ ಮಸೀದಿ ಮತ್ತು ನೂರುಲ್ ಹುದಾ ಮಸೀದಿ ಸದಸ್ಯರು, ಆಶಾ ಕಾರ್ಯಕರ್ತೆ ಸುಕೇತಾ, ಅಂಗನವಾಡಿ ಕಾರ್ಯಕರ್ತೆ ಪದ್ಮಾವತಿ, , ಪಿಎಫ್ಐ ಮತ್ತು ಕಾಂಗ್ರೆಸ್ ಕಾರ್ಯಕರ್ತರು ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು. ಇಸ್ಮಾಯಿಲ್ ಧನ್ಯಾವಾದಗೈದರು.

Join Whatsapp