ಜನರು ಜಾತಿ, ದುಡ್ಡು ನೋಡಿ ವೋಟು ಹಾಕ್ತಾರೆ: ಸಿದ್ದರಾಮಯ್ಯ ಬೇಸರ

Prasthutha|

ಮೈಸೂರು; ಇತ್ತೀಚೆಗೆ ಜನರು ಅಭಿವೃದ್ಧಿ ನೋಡಿ ಮತ ಹಾಕುವುದನ್ನು ಬಿಟ್ಟು ಬಿಟ್ಟಿದ್ದಾರೆ. ಬದಲಿಗೆ ಜಾತಿ, ದುಡ್ಡು ನೋಡಿ ಮತ ಹಾಕುತ್ತಾರೆ ಎಂದು ವಿಪಕ್ಷ ನಾಯಕ ಸಿದ್ದರಾಮಯ್ಯ ಬೇಸರ ವ್ಯಕ್ತಪಡಿಸಿದ್ದಾರೆ.

- Advertisement -

ಚಾಮುಂಡೇಶ್ವರಿ ಕ್ಷೇತ್ರದಲ್ಲಿ ಏನೇ ಕೆಲಸ ಆಗಿದ್ದರೂ ನನ್ನಿಂದಲೇ ಹೊರತು ಬೇರೆ ಯಾರೂ ಮಾಡಿಲ್ಲ, ಇದನ್ನು ಎಲ್ಲಿ ಬೇಕಾದರೂ ಹೇಳುತ್ತೇನೆ. ಮತದಾರರು ಕೆಲಸ ನೋಡಿ ಮತ ಹಾಕುವುದು ಕಡಿಮೆಯಾಗಿದೆ. ಮೈಸೂರಿಗೆ ನಾನು ಮಾಡಿದಷ್ಟು ಕೆಲಸ ಬೇರೆ ಯಾರೂ ಮಾಡಿಲ್ಲ. ಇತ್ತೀಚೆಗೆ ಜಾತಿ, ದುಡ್ಡಿನ ಮೇಲೆ ಜನ ಮತ ಹಾಕುತ್ತಿದ್ದಾರೆ ಎಂದಿದ್ದಾರೆ.

ಚಾಮುಂಡೇಶ್ವರಿ ಕ್ಷೇತ್ರದಲ್ಲಿ ನನ್ನನ್ನು ಸೋಲಿಸಿದ್ದಾರೆ ಮತ್ತು ಗೆಲ್ಲಿಸಿದ್ದಾರೆ. ನಾನು ಸೋಲು, ಗೆಲುವನ್ನು ಸಮಚಿತ್ತದಿಂದ ಸ್ವೀಕರಿಸಿದ್ದೇನೆ. ಸೋಲಿಸಿದ್ದಾರೆ ಅಂತಾ ವ್ಯಥೆ ಪಡಲ್ಲ, ಅಳಲು ಹೋಗುವುದಿಲ್ಲ. 2018ರ ಎಲೆಕ್ಷನ್‌ನಲ್ಲಿ ಚಾಮುಂಡೇಶ್ವರಿ ಕ್ಷೇತ್ರದಲ್ಲಿ ನಾನು ಸೋತೆ. ಜನರು ಅಭಿವೃದ್ಧಿ ನೋಡಿ ಮತ ಹಾಕಿದ್ದರೆ ನಾನೇ ಗೆಲ್ಲಬೇಕಿತ್ತು ಎಂದು ಹೇಳಿದ್ದಾರೆ.



Join Whatsapp