GST ಹೆಚ್ಚಳ- ಟ್ಯಾಕ್ಸ್ ಟೆರರಿಸಂ: ಪ್ರಿಯಾಂಕ್ ಖರ್ಗೆ ವಾಗ್ದಾಳಿ

Prasthutha|

ಬೆಂಗಳೂರು: ಕೇಂದ್ರ ಸರಕಾರದ  ದಿನಬಳಕೆಯ ವಸ್ತುಗಳ ಮೇಲೆ GST ಹೆಚ್ಚಳದ ಬಗ್ಗೆ ಆಕ್ರೋಶ ವ್ಯಕ್ತಪಡಿಸಿರುವ ಶಾಸಕ ಪ್ರಿಯಾಂಕ್ ಖರ್ಗೆ, GST ಹೆಚ್ಚಳವು ಟ್ಯಾಕ್ಸ್ ಟೆರರಿಸಂ ಎಂದು ವಾಗ್ದಾಳಿ ನಡೆಸಿದ್ದಾರೆ.

- Advertisement -

ನಗರದಲ್ಲಿ ಸುದ್ದಿಗಾರರೊಂದಿಗೆ ಮಾತಾಡಿದ ಪ್ರಿಯಾಂಕ್ ಖರ್ಗೆ, ಇದೊಂದು ಜನವಿರೋಧಿ ನೀತಿಯಾಗಿದ್ದು, ಇವೆಲ್ಲವೂ ಮೋದಿ ಸರಕಾರದ ಸಂಪೂರ್ಣ ವೈಫಲ್ಯವನ್ನು ಎತ್ತಿ ತೋರಿಸುತ್ತದೆ ಎಂದು ಟೀಕಿಸಿದರು. ಮೋದಿ ಆಡಳಿತಕ್ಕೆ ಬಂದಾಗಿನಿಂದ ಬೆಲೆ ಹೆಚ್ಚಳ ನಿರಂತರವಾಗಿದೆ. ಇಂತಹ ಕಠುವಾದ ರೀತಿಯಿಂದ ಕೆಲವು ಕುಟುಂಬಗಳು ಬಡತನ ರೇಖೆಗಿಂತ ಇನ್ನಷ್ಟು ಕೆಳಗಿಳಿಯಲು ಕಾರಣವಾಗಿದೆ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ,

Join Whatsapp