ಕಾಂಗ್ರೆಸ್ ಬಿಟ್ಟು ಬಿಜೆಪಿಗೆ ಸೇರಿದ್ದಕ್ಕೆ ಜನ ನನ್ನ ಸೋಲಿಸಿಬಿಟ್ಟರು: ಎಂಟಿಬಿ ನಾಗರಾಜ್

Prasthutha|

ಚಿಕ್ಕಬಳ್ಳಾಪುರ: ಉಪಚುನಾವಣೆ ವೇಳೆ ಕಾಂಗ್ರೆಸ್ ಬಿಟ್ಟು ಬಿಜೆಪಿಗೆ ಸೇರಿದ್ದಕ್ಕೆ ಜನ ನನ್ನನ್ನು ಸೋಲಿಸಿಬಿಟ್ಟರು ಎಂದು ಪೌರಾಡಳಿತ ಇಲಾಖೆ ಸಚಿವ ಎಂಟಿಬಿ ನಾಗರಾಜ್ ಹೇಳಿದ್ದಾರೆ.
ಚಿಕ್ಕಬಳ್ಳಾಪುರದ ಜರಬಂಡಹಳ್ಳಿ ಗ್ರಾಮದಲ್ಲಿ ನಡೆದ ಜಿಲ್ಲಾಧಿಕಾರಿಗಳ ನಡೆ ಹಳ್ಳಿಗಳ ಕಡೆ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಯಾವ ಶಾಸಕರು, ಸಚಿವರು ಸರ್ಕಾರ ಕೆಲಸ ಮಾಡಿದೆ ಅಂತ ಜನರೇ ನೆನೆಪಿಟ್ಟುಕೊಳ್ಳಿ. ಯಾಕೆಂದರೆ ಚುನಾವಣೆ ಬಂದ ನಾಲ್ಕೈದು ದಿನದಲ್ಲೇ ಮೆರೆತು ಬಿಡುತ್ತೀರಾ. ನಿದ್ದೆ ಮಂಪರು ಬಂದ ಹಾಗೆ ತೂಕಡಿಸಿಬಿಡುತ್ತೀರಾ. ಮೊನ್ನೆ ನಡೆದ ಬೈ ಎಲೆಕ್ಷನ್ ನಲ್ಲಿ ನಾನು ಸೋಲಬೇಕಿತ್ತಾ? ಆದರೆ ಸೋಲಿಸಿಬಿಟ್ಟಿದ್ದೀರಾ ಎಂದಿದ್ದಾರೆ.
ಈ ವಿಚಾರದಲ್ಲಿ ನನ್ನದು ಒಂದು ತಪ್ಪಿದೆ. ಸುಧಾಕರ್ ಜೊತೆಗೆ ನಾನು ಕಾಂಗ್ರೆಸ್ ಬಿಟ್ಟು ಬಿಜೆಪಿಗೆ ಬಂದನಲ್ಲ ಅದಕ್ಕೆ ಸೋಲಿಸಿಬಿಟ್ಟಿದ್ದೀರಾ. ಆದರೆ ಸುಧಾಕರ್ನನ್ನು ಗೆಲ್ಲಿಸಿದ್ದೀರಾ. ಇದೇ ನನಗೆ ನೋವು ತರಿಸಿದೆ ಎಂದು ಅಸಮಾಧಾನ ವ್ಯಕ್ತಪಡಿಸಿದ್ದಾರೆ.

Join Whatsapp