ಇನ್ಮುಂದೆ ನಿಧಾನವಾಗಿ ವಾಹನ ಚಲಾಯಿಸಿದರೂ ದಂಡ!: ಏನಿದು ಹೊಸ ನಿಯಮ?

Prasthutha|

ನವದೆಹಲಿ: ದೆಹಲಿ ಸರಕಾರ ಟ್ರಾಫಿಕ್ ಸಂಬಂಧಿತವಾಗಿ ಹೊಸ ನಿಯಮ ಜಾರಿಗೆ ತಂದಿದೆ. ನಿಯಮಿತ ವೇಗಕ್ಕಿಂತ ಕಡಿಮೆ ವೇಗದಲ್ಲಿ ವಾಹನ ಚಲಾವಣೆ ಮಾಡಿದರೆ ದಂಡ ಬೀಳಲಿದ್ದು, ದೆಹಲಿ-ಮೀರತ್ ಎಕ್ಸ್ಪ್ರೆಸ್ವೇನಲ್ಲಿ ಈ ಹೊಸ ನಿಯಮ ಜಾರಿಗೆ ತರಲು ಸರಕಾರ ನಿರ್ದೇಶಿಸಿದೆ.

- Advertisement -

ದೆಹಲಿ-ಮೀರತ್ ಎಕ್ಸ್ಪ್ರೆಸ್ ವೇ ದೇಶದ ಉನ್ನತ ದರ್ಜೆಯ ಹೆದ್ದಾರಿಗಳಲ್ಲಿ ಒಂದಾಗಿದ್ದು, ಇಲ್ಲಿ ಇನ್ಮುಂದೆ ನಿಗದಿತ ವೇಗದಲ್ಲೇ ವಾಹನ ಚಲಾಯಿಸಬೇಕಿದೆ. ಈ ನಿಯಮ ಪಾಲಿಸದೇ ಇದ್ದರೆ ರೂ. 500 ರಿಂದ ರೂ. 2000 ವರೆಗೆ ದಂಡ ತೆರಬೇಕಾಗಿ ಬರುತ್ತದೆ.

ದೇಶದಲ್ಲಿ ಹೆಚ್ಚಿನ ಅಪಘಾತಗಳು ಓವರ್ಟೇಕ್ ಮಾಡುವ ಸಂದರ್ಭದಲ್ಲಿ ಸಂಭವಿಸುತ್ತವೆ. ಓವರ್ಟೇಕ್ ಮಾಡುವಾಗ, ನಿಮ್ಮ ವಾಹನದ ವೇಗದ ಬಗ್ಗೆ ನೀವು ವಿಶೇಷ ಕಾಳಜಿ ವಹಿಸಬೇಕಾಗಲಿದೆ. ವಿಶೇಷವಾಗಿ ಸಿಂಗಲ್ ರೋಡ್ಗಳಲ್ಲಿ ಓವರ್ಟೇಕ್ ಮಾಡುವಾಗ ಚಾಲಕರು ಬಹಳ ಜಾಗರೂಕರಾಗಿರಬೇಕು. ಇದೇ ರೀತಿ, ಇದೀಗ ನೀವು ಎಕ್ಸ್ಪ್ರೆಸ್ವೇನಲ್ಲಿ ಚಾಲನೆ ಮಾಡುತ್ತಿದ್ದರೆ, ಓವರ್ಟೇಕ್ ಮಾಡುವಾಗ ನಿಗದಿತ ವೇಗದ ಮಿತಿಗಿಂತ ಕಡಿಮೆ ವಾಹನ ಚಲಾಯಿಸಿದರೆ ನಿಮಗೆ ದಂಡ ಬೀಳಲಿದೆ.

- Advertisement -

ದೆಹಲಿ-ಮೀರತ್ ಎಕ್ಸ್ಪ್ರೆಸ್ವೇ ಅನ್ನು ದೇಶದ ಈ ಅತ್ಯುತ್ತಮ ಹೆದ್ದಾರಿ ಎಂದು ಹೇಳಲಾಗುತ್ತಿದ್ದರೂ ಅದರ ಕಾಮಗಾರಿ ಇನ್ನೂ ಸಂಪೂರ್ಣವಾಗಿ ಪೂರ್ಣಗೊಂಡಿಲ್ಲ. ದೆಹಲಿಯಿಂದ ಮೀರತ್ಗೆ ಹೋಗುವ ಮಾರ್ಗದಲ್ಲಿ ಗಾಜಿಯಾಬಾದ್ನ ಲಾಲ್ಕುವಾನ್ ಮೇಲ್ಸೇತುವೆ ಬಳಿ ಇಂದಿಗೂ ಈ ಹೆದ್ದಾರಿಯಲ್ಲಿ ನಿರ್ಮಾಣ ಕಾರ್ಯ ಮುಂದುವರೆದಿದೆ. ಗಾಜಿಯಾಬಾದ್ನಿಂದ ಮೀರತ್ಗೆ ಹೋಗುವ ಸಮಯದಲ್ಲಿ, ವಿಜಯನಗರ, ಕ್ರಾಸಿಂಗ್ ರಿಪಬ್ಲಿಕ್ ಸೊಸೈಟಿಯ ಮುಂಭಾಗದಲ್ಲಿರುವ ಈ ಹೆದ್ದಾರಿಯಲ್ಲಿ ಆಗಾಗ್ಗೆ ಟ್ರಾಪಿಕ್ ಜಾಮ್ ಉಂಟಾಗುತ್ತಲೇ ಇರುತ್ತದೆ.

Join Whatsapp