ಪ್ಯಾರಿಸ್, ಜು.30: ಮೀಡಿಯಾಪಾರ್ಟ್ ನ ಇಬ್ಬರು ಪತ್ರಕರ್ತರಾದ ಲೆನಾಗ್ ಬ್ರೆಡೌಕ್ಸ್ ಮತ್ತು ಎಡ್ವಿ ಪ್ಲೆನೆಲ್ ರವರ ಫೋನ್ ಹ್ಯಾಕಿಂಗ್ ಆಗಿರುವುದನ್ನು ಫ್ರಾನ್ಸ್ ನ ಏಜೆನ್ಸಿ ದೃಢಪಡಿಸಿದೆ. ತನಿಖಾ ಸುದ್ದಿವಾಹಿನಿ ಮೀಡಿಯಾಪಾರ್ಟ್ನ ಇಬ್ಬರು ಫ್ರೆಂಚ್ ಪತ್ರಕರ್ತರ ಮೊಬೈಲ್ ಫೋನ್ ಗಳನ್ನು ಪೆಗಾಸಸ್ ಸ್ಪೈವೇರ್ನೊಂದಿಗೆ ಹ್ಯಾಕ್ ಮಾಡಲಾಗಿದೆ ಎಂದು ಫ್ರಾನ್ಸ್ ನ ಸೈಬರ್ ಸೆಕ್ಯುರಿಟಿ ಏಜೆನ್ಸಿ ದೃಢ ಪಡಿಸಿದೆ.
ಮೀಡಿಯಾಪಾರ್ಟ್ನ ಇಬ್ಬರು ಪತ್ರಕರ್ತರ ಫೋನ್ಗಳ ಹ್ಯಾಕಿಂಗ್ ಅನ್ನು 50,000 ಫೋನ್ ಸಂಖ್ಯೆಗಳನ್ನು ಗುರಿಯಾಗಿಸಿಕೊಂಡು ಅಂತಾರಾಷ್ಟ್ರೀಯ ಪತ್ರಕರ್ತರ ಒಕ್ಕೂಟವು ವರದಿ ಮಾಡಿತ್ತು. ಫ್ರಾನ್ಸಿನ ಸೈಬರ್ ಸೆಕ್ಯೂರಿಟಿ ಇದನ್ನು ಖಚಿತ ಪಡಿಸಿರುವುದರ ಮೂಲಕ ಪೆಗಾಸಸ್ ಫೋನ್ ಕಳ್ಳಗಿವಿ ಬಗೆಗೆ ಸ್ಪಷ್ಟ ಪುರಾವೆ ನೀಡಿದ ಮೊದಲ ಸರಕಾರದ ತನಿಖಾ ಸಂಸ್ಥೆಯಾಗಿದೆ. ಇಸ್ರೇಲಿನ ಎನ್ ಎಸ್ ಓ ಗುಂಪಿನ ತಯಾರಿಕೆಯಾದ ಪೆಗಾಸಸ್ ಫೋನ್ ದತ್ತಾಂಶ ಕದಿಯುವಲ್ಲಿ ಪ್ರಮುಖ ಪಾತ್ರ ವಹಿಸಿರುವುದು ತಿಳಿದು ಬಂದಿದೆ.
ಎಎನ್ ಎಸ್ ಎಸ್ ಐ- ಏಜೆನ್ಸ್ ನೇಷನಲ್ ಡೆ ಲಾ ಸೆಕ್ಯೂರಿಟ್ ಡೆಸ್ ಸಿಸ್ಟಮ್ಸ್ ಡಿ`ಇನ್ಫರ್ಮೇಷನ್ ಇದರ ಐಟಿ ವಿಶೇಷಜ್ಞರು ಪೆಗಾಸಸ್ ಕಳ್ಳಗಿವಿ ಬಗೆಗೆ ಖಚಿತ ಮಾಹಿತಿ ಕಲೆ ಹಾಕಿದ್ದಾರೆ. ಪೆಗಾಸಸ್ ಸೋಂಕು, ಅದರ ಮಾದರಿ, ದಿನಾಂಕ ಮತ್ತು ಕದ್ದ ಅವಧಿ ಎಲ್ಲವೂ ಖಚಿತಗೊಂಡಿದೆ ಎಂದು ಫ್ರಾನ್ಸ್ ನಿಂದ ವರದಿಯಾಗಿದೆ.