ಅಲೋಪಥಿ ಪದ್ಧತಿಯ ಬಗ್ಗೆ ವಿವಾದಿತ ಹೇಳಿಕೆ: ದೆಹಲಿ ಹೈಕೋರ್ಟ್​ನಿಂದ ಬಾಬಾ ರಾಮ್ ದೇವ್​ ಗೆ ನೋಟಿಸ್ ಜಾರಿ

Prasthutha|

ನವದೆಹಲಿ, ಜು,30: ಅಲೋಪಥಿ ಪದ್ಧತಿಯ ಬಗ್ಗೆ ಅವಹೇಳನಕಾರಿ ಹೇಳಿಕೆ ನೀಡಿ ವಿವಾದಕ್ಕೀಡಾಗಿದ್ದ ಯೋಗಗುರು ಬಾಬಾ ರಾಮದೇವ್ ಗೆ ದೆಹಲಿ ಹೈಕೋರ್ಟ್ ನೋಟಿಸ್ ಜಾರಿಗೊಳಿಸಿದೆ.

- Advertisement -

ಕೊರೋನಾಗೆ ಅಲೋಪಥಿ ಔಷಧಗಳನ್ನು ತೆಗೆದುಕೊಂಡ ಲಕ್ಷಾಂತರ ಜನರು ಈಗಾಗಲೇ ಸಾವನ್ನಪ್ಪಿದ್ದಾರೆ. ಅಲೋಪಥಿಯೊಂದು ಅವಿವೇಕದ ವಿಜ್ಞಾನ ಎಂದು ಹೇಳಿಕೆ ನೀಡಿ ಅನೇಕರ ಕೆಂಗಣ್ಣಿಗೆ ಗುರಿಯಾಗಿದ್ದರು. ಈ ಹೇಳಿಕೆಯನ್ನು ವಿರೋಧಿಸಿ ಅನೇಕ ರಾಜ್ಯಗಳಲ್ಲಿ ಬಾಬಾ ರಾಮದೇವ್ ವಿರುದ್ಧ ಕೇಸ್​ಗಳು ಕೂಡ ದಾಖಲಾಗಿದ್ದವು.

ಅಸಂಬದ್ಧ ಹೇಳಿಕೆಗಳನ್ನು ನೀಡಿ ಜನರಲ್ಲಿ ಅಲೋಪಥಿ ಬಗ್ಗೆ ಭಯ ಹುಟ್ಟಿಸುತ್ತಿರುವ ಬಾಬಾ ರಾಮದೇವ್ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕೆಂದು ಭಾರತೀಯ ವೈದ್ಯಕೀಯ ಸಂಘ (ಐಎಂಎ) ಕೇಂದ್ರ ಸರ್ಕಾರವನ್ನು ಒತ್ತಾಯಿಸಿತ್ತು. ಹಲವು ವೈದ್ಯರು ದೇಶದ ನಾನಾ ಭಾಗಗಳಲ್ಲಿ ರಾಮದೇವ್ ವಿರುದ್ಧ ದೂರು ದಾಖಲಿಸಿದ್ದರು.

- Advertisement -

ಬಾಬಾ ರಾಮದೇವ್ ಅಲೋಪಥಿ ಕುರಿತು ನೀಡಿದ ಹೇಳಿಕೆ ಅವೈಜ್ಞಾನಿಕವಾಗಿದೆ ಎಂದು ಹೇಳಿದ್ದ ಕೇಂದ್ರ ಆರೋಗ್ಯ ಸಚಿವ ಡಾ. ಹರ್ಷವರ್ಧನ್, ಆ ಹೇಳಿಕೆಯನ್ನು ವಾಪಸ್ ಪಡೆಯುವಂತೆ ಬಾಬಾ ರಾಮದೇವ್ ​ಗೆ ಪತ್ರ ಬರೆದಿದ್ದರು. ತಮ್ಮ ಹೇಳಿಕೆ ವಿವಾದಕ್ಕೀಡಾದ ಬಳಿಕ ಎಚ್ಚೆತ್ತುಕೊಂಡಿದ್ದ ಬಾಬಾ ರಾಮದೇವ್ ಮೇ ತಿಂಗಳಲ್ಲಿ ಕ್ಷಮಾಪಣೆಯನ್ನೂ ಕೇಳಿದ್ದರು. ಹಾಗೇ, ವೈದ್ಯರು ಭೂಲೋಕದ ದೇವದೂತರು. ನಾನು ಕೂಡ ಕೊರೋನಾ ಲಸಿಕೆ ಪಡೆಯುತ್ತೇನೆ ಎಂದು ಹೇಳಿಕೆ ನೀಡಿ ತಮ್ಮ ತಪ್ಪನ್ನು ತಿದ್ದಿಕೊಳ್ಳಲು ಮುಂದಾಗಿದ್ದರು.

ಈ ಪ್ರಕರಣದಲ್ಲಿ ಯೋಗಗುರು ಬಾಬಾ ರಾಮದೇವ್​ ಗೆ ಇಂದು ನೋಟಿಸ್ ಜಾರಿ ಮಾಡಿದೆ. ಅಲೋಪಥಿ ಪದ್ಧತಿ ಮತ್ತು ಅಲೋಪಥಿ ವೈದ್ಯರ ವಿರುದ್ಧ ಜನರಿಗೆ ತಪ್ಪು ಮಾಹಿತಿಯನ್ನು ನೀಡುತ್ತಿದ್ದಾರೆ ಎಂದು ಹೈಕೋರ್ಟ್ ನೋಟಿಸ್ ಜಾರಿಗೊಳಿಸಿದ್ದು, ಆಗಸ್ಟ್ 10ರಂದು ಈ ಕುರಿತು ವಿಚಾರಣೆಗೆ ಹಾಜರಾಗುವಂತೆ ಸೂಚಿಸಿದೆ.

Join Whatsapp