ಪೆಗಾಸಸ್ ಫೋನ್ ಕದ್ದಾಲಿಕೆ ಖಂಡನೀಯ: ಯುರೋಪಿಯನ್ ಆಯೋಗ

Prasthutha|

ಪ್ರೇಗ್: ಇಸ್ರೇಲಿ ಪತ್ತೇದಾರಿ ಸಾಫ್ಟ್ವೇರ್ ಪೆಗಾಸಸ್‌ ಫೋನ್ ಕದ್ದಾಲಿಕೆ ಖಂಡನೀಯ ಎಂದು ಯುರೋಪಿಯನ್ ಆಯೋಗದ ಮುಖ್ಯಸ್ಥೆ ಉರ್ಸುಲಾ ವಾಂಡೆರ್ ಲೀನ್ ಹೇಳಿದ್ದಾರೆ.

- Advertisement -

ಪೆಗಾಸಸ್ ಎಂಬುದು ಇಸ್ರೇಲಿ ಕಂಪನಿ NSO ಗ್ರೂಪ್ 2016 ರಲ್ಲಿ ಸೈಬರ್ ಆಯುಧವಾಗಿ ಅಭಿವೃದ್ಧಿಪಡಿಸಿದ ಸಾಫ್ಟ್ವೇರ್ ಆಗಿದೆ. NSO ಗ್ರೂಪ್ ಸರ್ಕಾರಗಳಿಗೆ ಪೆಗಾಸಸ್ ಅನ್ನು ವಿತರಿಸುತ್ತಿದೆ ಎಂದು ವಾಷಿಂಗ್ಟನ್ ಪೋಸ್ಟ್ ಮತ್ತು ಗಾರ್ಡಿಯನ್ ಈ ಹಿಂದೆ ವರದಿ ಮಾಡಿತ್ತು.

ಪೆಗಾಸಸ್ ಡೇಟಾಬೇಸ್ ಪ್ರಪಂಚದಾದ್ಯಂತದ 50,000 ಕ್ಕೂ ಹೆಚ್ಚು ಜನರ ಫೋನ್ ಸಂಖ್ಯೆಯನ್ನು ಹೊಂದಿದೆ ಎಂದು ವಾಷಿಂಗ್ಟನ್ ಪೋಸ್ಟ್ ವರದಿ ಮಾಡಿದೆ. ಡೇಟಾಬೇಸ್‌ನಲ್ಲಿ ಅರಬ್ ರಾಜಮನೆತನದ ಸದಸ್ಯರು, ಉದ್ಯಮಿಗಳು, ಮಾನವ ಹಕ್ಕುಗಳ ಕಾರ್ಯಕರ್ತರು, ಪತ್ರಕರ್ತರು, ರಾಜಕಾರಣಿಗಳು ಮತ್ತು ಸರ್ಕಾರಿ ಅಧಿಕಾರಿಗಳು ಸೇರಿದ್ದಾರೆ ಎಂದು ವರದಿಯಾಗಿದೆ.

- Advertisement -

ಪ್ರೇಗ್ ನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಯುರೋಪ್ಯನ್ ಆಯೋಗದ ಮುಖ್ಯಸ್ಥೆ ಉರ್ಸುಲಾ, ಪತ್ರಕರ್ತರ ಫೋನ್‌ ಕದ್ದಾಲಿಕೆಯನ್ನು ತೀವ್ರವಾಗಿ ಟೀಕಿಸಿದ್ದಾರೆ. ಪತ್ರಿಕಾ ಸ್ವಾತಂತ್ರ್ಯವು ಯುರೋಪಿಯನ್ ಒಕ್ಕೂಟದ ಮೂಲಭೂತ ಮೌಲ್ಯಗಳಲ್ಲಿ ಒಂದಾಗಿದೆ ಎಂದು ಅವರು ಈ ವೇಳೆ ಹೇಳಿದರು.

2019 ರಲ್ಲಿ ಫೇಸ್‌ಬುಕ್ NSO ಗ್ರೂಪ್ ವಿರುದ್ಧ ಮೊಕದ್ದಮೆ ಹೂಡಿತ್ತು. ಫೋನ್ ಕದ್ದಾಲಿಕೆಗೆ ಪೆಗಾಸಸ್ ಸುಲಭವಾದ ಅತ್ಯಾಧುನಿಕ ಆಯುಧ ಎಂದು ಸೈಬರ್ ಭದ್ರತಾ ಸಂಶೋಧಕರು ಹೇಳುತ್ತಾರೆ. ಅನಗತ್ಯ ವೆಬ್‌ಸೈಟ್ ಲಿಂಕ್, ವಾಯ್ಸ್ ಕಾಲ್ ಅಥವಾ ಮಿಸ್ಡ್ ಕಾಲ್ ಮೂಲಕ ಪೆಗಾಸಸ್ ನೊಂದಿಗೆ ಫೋನ್‌ಗಳನ್ನು ಹ್ಯಾಕ್ ಮಾಡಲಾಗುತ್ತದೆ ಎಂದು ಸಂಶೋಧಕರು ತಿಳಿಸಿದ್ದಾರೆ.

Join Whatsapp