ಮಂಗಳೂರು: ಏರ್ ಪೋರ್ಟ್ ಎಸ್ಕಲೇಟರ್ ನಲ್ಲಿ ಆಯ ತಪ್ಪಿ ಬಿದ್ದ ಮಹಿಳೆ | ಸಮಯ ಪ್ರಜ್ಞೆ ಮೆರೆದ ಭದ್ರತಾ ಸಿಬ್ಬಂದಿಗೆ ಮೆಚ್ಚುಗೆ

Prasthutha|

ಮಂಗಳೂರು: ಮಹಿಳೆಯೊಬ್ಬರನ್ನ ಎಸ್ಕಲೇಟರ್ ಅವಘಡದಿಂದ ಪಾರು ಮಾಡಿದ ಭದ್ರತಾ ಸಿಬ್ಬಂದಿಯನ್ನು ‘ಅದಾನಿ ಮಂಗಳೂರು ಅಂತರಾಷ್ಟ್ರೀಯ ವಿಮಾನ ನಿಲ್ದಾಣ’ ಪ್ರಾಧಿಕಾರವು ಅಭಿನಂದಿಸಿದೆ. ತನ್ನ ‘ಮಂಗಳೂರು ಏರ್ ಪೋರ್ಟ್’ ಅಧಿಕೃತ ಟ್ವಿಟ್ಟರ್ ಖಾತೆಯಲ್ಲಿ ಈ ವಿಚಾರವನ್ನ ಟ್ವೀಟ್ ಮಾಡಿರುವ ವಿಮಾನ ನಿಲ್ದಾಣ ಪ್ರಾಧಿಕಾರವು ಕರ್ತವ್ಯದಲ್ಲಿದ್ದ ಭದ್ರತಾ ಸಿಬ್ಬಂದಿಯ ಸಮಯ ಪ್ರಜ್ಞೆಗೆ ಮೆಚ್ಚುಗೆಯನ್ನು ಸೂಚಿಸಿದೆ.

- Advertisement -

ಕೆಲವು ದಿನಗಳ ಹಿಂದೆ ಮಹಿಳೆಯೊಬ್ಬರು ವಿಮಾನ ನಿಲ್ದಾಣಕ್ಕೆ ಆಗಮಿಸುವ ಸಮಯಲ್ಲಿ ಎಸ್ಕಲೇಟರ್ ನಲ್ಲಿ ಆಯತಪ್ಪಿ ಕೆಳಕ್ಕೆ ಬಿದ್ದಿದ್ದರು ಎನ್ನಲಾಗಿದೆ. ತಕ್ಷಣವೇ ಎಚ್ಚೆತ್ತುಕೊಂಡ ಸಿಐಎಸ್ಎಫ್ ಭದ್ರತಾ ಸಿಬ್ಬಂದಿ ಶಾಹಿದ್ ಅಮೀನ್ ತುರ್ತು ಸ್ಥಗಿತ ಗುಂಡಿಯನ್ನ ಒತ್ತಿ ಎಸ್ಕಲೇಟರ್ ಚಾಲನೆಯನ್ನ ಸ್ಥಗಿತಗೊಳಿಸಿದ್ದಾರೆ. ಹೀಗಾಗಿ ಮಹಿಳೆಯು ಹೆಚ್ಚಿನ ಅಪಾಯವಿಲ್ಲದೇ ಅವಘಡದಿಂದ ಪಾರಾಗಿದ್ದರು ಎನ್ನಲಾಗಿದೆ.

ಶಾಹಿದ್ ಅಮೀನ್ ಮೂಲತಃ ಬೆಳಗಾವಿ ಜಿಲ್ಲೆಯವರಾಗಿದ್ದು, ಕಳೆದ ಮೂರು ವರುಷಗಳಿಂದ ಮಂಗಳೂರು ವಿಮಾನ ನಿಲ್ದಾಣದಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದಾರೆ ಎನ್ನಲಾಗಿದೆ. ಇವರ ಕರ್ತವ್ಯ ಪ್ರಜ್ಞೆಗೆ ಸಿಐಎಸ್ಎಫ್ ಕೂಡಾ ಮೆಚ್ಚುಗೆ ಸೂಚಿಸಿದೆ.

Join Whatsapp