ಬಟಾಣಿ: ಆರೋಗ್ಯ ಪ್ರಯೋಜನಗಳ ಗಣಿ

Prasthutha|

- Advertisement -

ಬಟಾಣಿ ಕಾಳು ಹಸಿ ಬಟಾಣಿ ಕಾಳುಗಳು ತಿನ್ನಲು ತುಂಬಾ ರುಚಿಕರ. ಆದರೆ ಕೆಲವರು ಸೇವಿಸಲು ಅಷ್ಟು ಇಷ್ಟಪಡೋದಿಲ್ಲ. ತರಕಾರಿಗಳಿಂದ ಬಟಾಣಿ ಕಾಳು ತೆಗೆದು ಊಟ ಮಾಡುವವರೂ ಇದ್ದಾರೆ. ಬಟಾಣಿ ಕಾಳು ಇಷ್ಟಪಡದವರಲ್ಲಿ ಮತ್ತು‌ ಇಷ್ಟವಿದ್ದರೂ ಯಾಕೋ ನಿಯಮಿತವಾಗಿ ಬಳಸದೇ ಇರೋರಲ್ಲಿ ನೀವೂ ಒಬ್ಬರೇ? ನಿಮ್ಮ ಉತ್ತರ ಹೌದು ಎಂದಾದರೆ ಈಗಲೇ ಬದಲಾಗಿ. ಬಟಾಣಿಗಳ ಆರೋಗ್ಯ ಪ್ರಯೋಜನಗಳ ಬಗ್ಗೆ ಮೊದಲು ತಿಳಿಯಿರಿ. ಆಮೇಲೆ ನಿಮ್ಮ ಅಡುಗರಯಲ್ಲಿ ಬಟಾಣಿಗೂ ಸ್ಥಾನ ಕಲ್ಪಿಸಿ.

ಬಟಾಣಿ ಕಾಳುಧಾನ್ಯಗಳಲ್ಲಿ ಆರೋಗ್ಯದ ದೊಡ್ಡ ನಿಧಿ ಅಡಗಿದೆ. ಪೌಷ್ಟಿಕ ತಜ್ಞ ಲೊವ್ನೀತ್ ಬಾತ್ರಾ ತಮ್ಮ ಇನ್ಸ್ಟಾಗ್ರಾಮ್ನಲ್ಲಿ ಬಟಾಣಿಗಳ ಪ್ರಯೋಜನಗಳ ಬಗ್ಗೆ ಪೋಸ್ಟ್ ಅನ್ನು ಹಂಚಿಕೊಂಡಿದ್ದಾರೆ. ಅದರಲ್ಲಿ ಬಟಾಣಿ ಕಾಳುಗಳ ಸೇವನೆ ಮಾಡದಿದ್ದರೆ ನೀವು ಯಾವೆಲ್ಲಾ ಆರೋಗ್ಯ ಸೌಲಭ್ಯಗಳಿಂದ ವಂಚಿತರಾಗುತ್ತೀರಿ ಎಂಬುದನ್ನು ಹೇಳಿದ್ದಾರೆ.

- Advertisement -

ಆದ್ದರಿಂದ ಬಟಾಣಿ ಧಾನ್ಯಗಳ ಕೆಲವು ವಿಶೇಷ ಆರೋಗ್ಯ ಪ್ರಯೋಜನಗಳ ಮಾಹಿತಿ ಇಲ್ಲಿದೆ:

ಇತರೆ ಅನೇಕ ತರಕಾರಿಗಳಿಗೆ ಹೋಲಿಸಿದರೆ ಬಟಾಣಿಗಳು ಕಡಿಮೆ ಗ್ಲೈಸೆಮಿಕ್ ಸೂಚಿ ಹೊಂದಿವೆ. ಇದರಿಂದ ರಕ್ತದ ಸಕ್ಕರೆ ಹೆಚ್ಚುವ ಭಯವಿಲ್ಲ. ಬಟಾಣಿಯಲ್ಲಿ ನಾರಿನಂಶ ಹೇರಳವಾಗಿದೆ. ಬಟಾಣಿಯಲ್ಲಿ ಪ್ರೋಟೀನ್ ಕೊರತೆ ಇಲ್ಲ. ರಕ್ತದ ಸಕ್ಕರೆ ಮಟ್ಟ ನಿಯಂತ್ರಿಸಲು ಇದು ಸುಲಭವಾದ ಕಾರಣಗಳಲ್ಲಿ ಒಂದಾಗಿದೆ.

ಬಟಾಣಿಯಲ್ಲಿ ಕೆಲವು ಪೋಷಕಾಂಶಗಳು ಇವೆ. ಇದು ತ್ವಚೆಯನ್ನು ಆರೋಗ್ಯಕರ ಆಗಿಸುತ್ತದೆ. ಬಟಾಣಿ ಕಾಳು ಬಿ6, ವಿಟಮಿನ್ ಸಿ ಮತ್ತು ಫೋಲಿಕ್ ಆಮ್ಲ ಹೊಂದಿದೆ. ಈ ಎಲ್ಲಾ ಪೋಷಕಾಂಶಗಳು ಉರಿಯೂತ ಕಡಿಮೆ ಮಾಡುತ್ತದೆ. ಇದು ಸ್ವತಂತ್ರ ರಾಡಿಕಲ್ಗಳಿಂದ ಚರ್ಮಕ್ಕೆ ಹಾನಿ ಆಗದಂತೆ ತಡೆಯುತ್ತದೆ.

ಬಟಾಣಿ ಕಾಳು ಪ್ರೋಟೀನ್‌ನ ಅತ್ಯುತ್ತಮ ಮೂಲವಾಗಿದೆ. ಪ್ರೋಟೀನ್ ಮಾತ್ರ ಸಸ್ಯ ಆಧಾರಿತ ಪ್ರೋಟೀನ್ಗಳನ್ನು ಅವಲಂಬಿಸಿರುವವರಿಗೆ ಬಟಾಣಿ ಕಾಳು ಅತ್ಯುತ್ತಮ ಆಯ್ಕೆ ಆಗಿದೆ. ಬಟಾಣಿ ಕಾಳುಗಳಲ್ಲಿ ನಾರಿನ ಪ್ರಮಾಣವೂ ಉತ್ತಮ ಆಗಿದೆ. ಪ್ರಾಣಿ ಮೂಲದ ಪ್ರೊಟೀನ್ ತೆಗೆದುಕೊಳ್ಳದವರು ಬಟಾಣಿ ಕಾಳು ತಿನ್ನುವುದರಿಂದ ಸಾಕಷ್ಟು ಪ್ರೊಟೀನ್ ಸಿಗುವುದು ಇದೇ ಕಾರಣಕ್ಕೆ ಆಗಿದೆ.

ಬಟಾಣಿ ತಿನ್ನುವುದರಿಂದ ಕೊಲೆಸ್ಟ್ರಾಲ್ ನಿಯಂತ್ರಣ ಉಳಿಯುತ್ತದೆ. ಬಟಾಣಿಯಲ್ಲಿ ನಿಯಾಸಿನ್ ಎಂಬ ಅಂಶ ಹೇರಳ ಆಗಿದೆ. ಈ ಅಂಶವು ಟ್ರೈಗ್ಲಿಸರೈಡ್‌ಗಳ ರಚನೆ ತಡೆಯುತ್ತದೆ. ಕೆಟ್ಟ ಕೊಲೆಸ್ಟ್ರಾಲ್ ನ್ನು ಕಡಿಮೆ ಮಾಡುವ ಮೂಲಕ ಉತ್ತಮ ಕೊಲೆಸ್ಟ್ರಾಲ್ ನ್ನು ಹೆಚ್ಚಿಸಲು ಬಟಾಣಿ ಕಾಳು ಸಹಕಾರಿ.

ಬಟಾಣಿ ಕಾಳು ಜೀರ್ಣಕ್ರಿಯೆಗೆ ಉತ್ತಮವೆಂದು ಪರಿಗಣಿಸಲಾಗಿದೆ. ಬಟಾಣಿಯಲ್ಲಿರುವ ನಾರಿನ ಗುಣಲಕ್ಷಣಗಳು ಜೀರ್ಣಾಂಗ ವ್ಯವಸ್ಥೆ ಸುಧಾರಿಸಲು ಸಹಾಯ ಮಾಡುತ್ತದೆ. ಅವುಗಳನ್ನು ಕರುಳು ಮತ್ತು ಹೊಟ್ಟೆಗೆ ಉತ್ತಮವೆಂದು ಪರಿಗಣಿಸಲಾಗುತ್ತದೆ. ಮಲಬದ್ಧತೆ ಮತ್ತು ಗ್ಯಾಸ್ ಸಮಸ್ಯೆ ಕಡಿಮೆ ಮಾಡಲು ಬಟಾಣಿ ಸೇವನೆ ಪ್ರಯೋಜನಕಾರಿ.

ಫೈಬರ್ ಗುಣಲಕ್ಷಣಗಳು ಹಸಿರು ಬಟಾಣಿಗಳಲ್ಲಿ ಕಂಡು ಬರುತ್ತವೆ. ಬಟಾಣಿ ತೂಕ ನಷ್ಟಕ್ಕೆ ಪ್ರಯೋಜನಕಾರಿ. ಬಟಾಣಿ ಕಾಳುಗಳಲ್ಲಿ ಕ್ಯಾಲೊರಿ ಪ್ರಮಾಣ ತುಂಬಾ ಕಡಿಮೆ ಆಗಿದೆ. ಬಟಾಣಿ ಕಾಳು ತಿನ್ನುವುದರಿಂದ ಹೊಟ್ಟೆ ತುಂಬಾ ಹೊತ್ತು ತುಂಬಿದ ಅನುಭವವಾಗುತ್ತದೆ. ಇದರಿಂದ ನಾವು ಅತಿಯಾಗಿ ತಿನ್ನುವುದನ್ನು ತಪ್ಪಿಸಬಹುದು ಮತ್ತು ತೂಕ ನಿಯಂತ್ರಿಸಬಹುದು.

ಇನ್ನೂ ಹಲವು ಪ್ರಯೋಜನಗಳಿವೆ. ಬಟಾಣಿಯೂ ನಿಮ್ಮ ಅಡುಗೆಯಲ್ಲಿರಲಿ, ವಾರಕ್ಕೆರಡು ಸಲವಾದರೂ ಇತರ ತರಕಾರಿಗಳ ಜೊತೆಗೆ ಅಥವಾ ಸಪರೇಟ್ ಆಗಿ ಬಟಾಣಿ ಪದಾರ್ಥ ಮಾಡಲು ಮರೆಯದಿರಿ.

Join Whatsapp