ಬೆಳಗಾವಿ: ನನ್ನ ಪುತ್ರ ಮೃಣಾಲ್ ಹೆಬ್ಬಾಳ್ಕರ್ ಧರಿಸಿರುವುದು ಪ್ಲಾಸ್ಟಿಕ್ ಪೆಂಡೆಂಟ್ ಎಂದು ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್ ಸ್ಪಷ್ಟನೆ ನೀಡಿದ್ದಾರೆ.
ಈ ವಿಚಾರವಾಗಿ ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್ ಮಾತನಾಡಿ, ನನ್ನ ಪುತ್ರ ಮೃಣಾಲ್ ಹೆಬ್ಬಾಳ್ಕರ್ ಧರಿಸಿರುವುದು ಪ್ಲಾಸ್ಟಿಕ್ ಪೆಂಡೆಂಟ್. ಮದುವೆ ಸಮಯದಲ್ಲಿ ಯಾರೋ ನನ್ನ ಪುತ್ರನಿಗೆ ಗಿಫ್ಟ್ ಕೊಟ್ಟಿದ್ದರು. ಅದು ಒರಿಜಿನಲ್ ಪೆಂಡೆಂಟ್ ಅಲ್ಲ ಎಂದು ಹೇಳಿದರು.
ನಾನು ಸಸ್ಯಾಹಾರಿ, ಹುಲಿ, ಜಿಂಕೆ, ಕೋಳಿ ಬಲಿಯನ್ನು ಇಷ್ಟಪಡಲ್ಲ. ನಮ್ಮ ಸಂಬಂಧಿಕರು ಬಂದಿದ್ದಾರೆ ಅವರನ್ನು ಬೀಳ್ಕೊಟ್ಟು ಬರುತ್ತೇನೆ. ಬಳಿಕ ಅಧಿಕಾರಿಗಳು ಕೇಳುವ ಎಲ್ಲಾ ಪ್ರಶ್ನೆಗೂ ಉತ್ತರ ಕೊಡುತ್ತೇನೆ ಎಂದರು.