ಭಕ್ತರ ಹರಕೆ ಸಂದಾಯ; ದೇವಸ್ಥಾನದ ಕಾಣಿಕೆ ಹುಂಡಿಯಲ್ಲಿ ಹಳೆಯ ನೋಟುಗಳು ಪತ್ತೆ

Prasthutha|

ಮೈಸೂರು: ಕಾಣಿಕೆ ಹುಂಡಿಯಲ್ಲಿ ಒಂದು ಲಕ್ಷಕ್ಕೂ ಹೆಚ್ಚಿನ ರದ್ದಾದ ನೋಟುಗಳು ಪತ್ತೆಯಾದ ಘಟನೆ ಚಾಮುಂಡಿಬೆಟ್ಟದಲ್ಲಿ ನಡೆದಿದೆ.

- Advertisement -

ಚಾಮುಂಡಿ ಸನ್ನಿಧಾನಕ್ಕೆ ಬಂದ ಭಕ್ತರು ತಮ್ಮ ಹರಕೆ ಈಡೇರಿಕೆಗೆ ಒಂದು ಲಕ್ಷಕ್ಕೂ ಹೆಚ್ಚಿನ ಹಣವನ್ನ ಹುಂಡಿಗೆ ಹಾಕಿದ್ದಾರೆ.

ಆಷಾಢ ಮಾಸದ ಹಿನ್ನೆಲೆಯಲ್ಲಿ ದೇವಸ್ಥಾನಕ್ಕೆ ಬಂದ ಭಕ್ತರು ಹುಂಡಿಯಲ್ಲಿ ಹಣ ಹಾಕಿದ್ದಾರೆ. ಆದರೆ, 2016 ನವೆಂಬರ್ 8 ರಂದು ನೋಟುಗಳನ್ನ ಅಮಾನ್ಯೀಕರಣಗೊಳಿಸಿದ್ದರೂ ಇಂದಿಗೂ ಹಳೆಯ 500 ಹಾಗೂ 1000 ರ ಮುಖ ಬೆಲೆಯ ನೋಟುಗಳು ಕಂಡು ಬರುತ್ತಿರುವು ದೇವಸ್ಥಾನದ ಸಿಬ್ಬಂದಿಗಳ ಅಚ್ಚರಿಗೆ ಕಾರಣವಾಗಿದೆ.

Join Whatsapp