ರೈಲು ಹತ್ತುವ ಸಂದರ್ಭ ಕಾಲು ಜಾರಿ ಬಿದ್ದ ಪ್ರಯಾಣಿಕ; ಅಪಾಯದಿಂದ ಪಾರು

Prasthutha|

ಶಿವಮೊಗ್ಗ: ತಾಳಗುಪ್ಪ-ಮೈಸೂರು ಎಕ್ಸ್ಪ್ರೆಸ್ ರೈಲು ಹತ್ತುವ ಸಂದರ್ಭದಲ್ಲಿ ಪ್ರಯಾಣಿಕರೊಬ್ಬರು ಕಾಲು ಜಾರಿ ಬಿದ್ದ ಘಟನೆ ನಗರದ ರೈಲು ನಿಲ್ದಾಣದಲ್ಲಿ ಶನಿವಾರ ನಡೆದಿದೆ.

- Advertisement -


ಘಟನೆಯ ದೃಶ್ಯ ರೈಲು ನಿಲ್ದಾಣದ ಸಿಸಿ ಕ್ಯಾಮರಾದಲ್ಲಿ ಸೆರೆಯಾಗಿದ್ದು, ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ. ಪ್ರಯಾಣಿಕ ಬೀಳುವುದನ್ನು ನೋಡಿದ ವ್ಯಕ್ತಿಯೊಬ್ಬರು ತಕ್ಷಣ ಅವರ ಸಹಾಯಕ್ಕೆ ಮುಂದಾಗಿದ್ದಾರೆ. ಈ ವೇಳೆ ಸುತ್ತಮುತ್ತಲಿದ್ದ ಜನರು ಹಾಗೂ ರೈಲ್ವೆ ಪೊಲೀಸರು ತಕ್ಷಣ ಓಡಿ ಬಂದಿದ್ದಾರೆ. ಅಲ್ಲದೆ ಕೆಳಕ್ಕೆ ಬಿದ್ದಿದ್ದ ಪ್ರಯಾಣಿಕನನ್ನು ರಕ್ಷಿಸಿ, ಆತನಿಗೆ ಪ್ರಥಮ ಚಿಕಿತ್ಸೆ ನೀಡಿದ ಬಳಿಕ ಕಳುಹಿಸಿಕೊಟ್ಟಿದ್ಧಾರೆ.


ರೈಲನ್ನು ಹತ್ತುವಾಗ ಅದು ಹೊರಡುವರೆಗೂ ಕಾಯದೇ ಮೊದಲೇ ಹತ್ತುವುದು ಕ್ಷೇಮ. ಈ ನಿಟ್ಟಿನಲ್ಲಿ ಎಲ್ಲಾ ಪ್ರಯಾಣಿಕರು ಮುನ್ನೆಚ್ಚರಿಕೆಯನ್ನು ವಹಿಸಬೇಕಿದೆ ಎಂದು ರೈಲ್ವೇ ಪೊಲೀಸರು ಎಚ್ಚರಿಕೆ ನೀಡಿದ್ದಾರೆ.

Join Whatsapp