ಖಾಸಗೀಕರಣಗೊಂಡ ಮಂಗಳೂರಿನ‌ ಅದಾನಿ ವಿಮಾನ ನಿಲ್ದಾಣದಲ್ಲಿ ಪಾರ್ಕಿಂಗ್ ಶುಲ್ಕ ಗಣನೀಯ ಏರಿಕೆ

Prasthutha|

ಮಂಗಳೂರು : ಖಾಸಗಿಕರಣಗೊಂಡ ಕೆಲವೇ ತಿಂಗಳಲ್ಲಿ  ಮಂಗಳೂರು ಅಂತರರಾಷ್ಟ್ರೀಯ ವಿಮಾನ ನಿಲ್ದಾಣದ ನಿರ್ವಹಣೆಯ ಗುತ್ತಿಗೆ ಪಡೆದಿರುವ ಅದಾನಿ ಕಂಪೆನಿಯು ಮೇ 1 ರಿಂದ ಪಾರ್ಕಿಂಗ್ ಶುಲ್ಕವನ್ನು ಏರಿಕೆ ಮಾಡಿದೆ.

- Advertisement -

ಕೋವಿಡ್ ನಂತಹ  ಕಷ್ಟದ ಸಮಯದಲ್ಲಿ ಜನರು ತತ್ತರಿಸಿರುವಾಗ  ಶುಲ್ಕವನ್ನು ಹೆಚ್ಚಿಸಿರುವುದಕ್ಕೆ ಪ್ರಯಾಣಿಕರು ಮತ್ತು ವಾಹನ ಚಾಲಕರು ಕಂಪನಿಯ ವಿರುದ್ಧ ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ.

ಇದಕ್ಕೂ ಮೊದಲು ಕೋಚ್ ಬಸ್ಸುಗಳು ಮತ್ತು ಟ್ರಕ್‌ಗಳಿಗೆ 30 ನಿಮಿಷಗಳ ಪಾರ್ಕಿಂಗ್‌ಗೆ 70 ರೂ. ಇದನ್ನು ಈಗ 300 ರೂಗೆ ಮತ್ತು ಎರಡು ಗಂಟೆಗಳ ಕಾಲ ಪಾರ್ಕಿಂಗ್ ಮಾಡುವುದಕ್ಕೆ 500 ರೂಪಾಯಿಗೆ ಏರಿಸಲಾಗಿದೆ.

- Advertisement -

ಮಿನಿ ಬಸ್ಸುಗಳು ಮತ್ತು ಟೆಂಪೊಗಳ ಪಾರ್ಕಿಂಗ್‌ಗೆ ಈ ಮೊದಲು 60 ರೂ. ಇದ್ದು, ಈಗ 200 ರೂ.ಗೆ ಹೆಚ್ಚಿಸಲಾಗಿದ್ದು, ಎರಡು ಗಂಟೆಗಳ ಕಾಲ ಪಾರ್ಕಿಂಗ್‌ಗೆ 350 ರೂ. ಪಾವತಿಸಬೇಕಾಗುತ್ತದೆ.

ಇನ್ನು ಕಂಪನಿಯು ತನ್ನ ಪ್ರಕಟಣೆಯಲ್ಲಿ, ಬಾಡಿಗೆ ಟ್ಯಾಕ್ಸಿಗಳ ನಿಲುಗಡೆಗೆ ಹಿಂದಿನ 55 ರೂ. ಬದಲಿಗೆ 60 ರೂ. ಮತ್ತು 90 ರೂ. ಹೆಚ್ಚಿಸಲಾಗಿದೆ.

ದ್ವಿಚಕ್ರ ವಾಹನ ನಿಲುಗಡೆ ಬೆಲೆಯನ್ನು 15 ರಿಂದ 20 ರೂ.ಗೆ ಹೆಚ್ಚಿಸಲಾಗಿದೆ. ಅದೇ ರೀತಿ, 24 ಗಂಟೆಗಳ ಪಾರ್ಕಿಂಗ್‌ಗೆ ಗರಿಷ್ಠ ಬೆಲೆಯನ್ನು ಹೆಚ್ಚಿಸಲಾಗುತ್ತದೆ. ಇದಲ್ಲದೆ, ಕಂಪನಿಯು ಮಾಡಿದ ಪ್ರಕಟಣೆಯ ಪ್ರಕಾರ ಯಾವುದೇ ಪಾರ್ಕಿಂಗ್ ನಿಯಮಗಳನ್ನು ಉಲ್ಲಂಘಿಸಿದಲ್ಲಿ ಪ್ರತ್ಯೇಕ ದಂಡ ವಿಧಿಸಲಾಗುತ್ತದೆ.

ಉಲ್ಲಂಘನೆ ಮಾಡಿದ ಬಸ್ಸುಗಳು, ಟೆಂಪೊಗಳು ಮತ್ತು ಕಾರುಗಳಿಗೆ 500 ರೂ. ಹಾಗೂ ದ್ವಿಚಕ್ರ ವಾಹನಗಳಿಗೆ 250 ರೂ. ವಿಧಿಸಲಾಗುತ್ತದೆ ಎಂದು ತಿಳಿಸಿದೆ.

Join Whatsapp