ಕೋವಿಡ್ ವಾರ್ಡಿಗೆ ತೆರಳಿ ರೋಗಿಗಳ ಆಕ್ಸಿಜನ್ ಪೈಪ್ ತೆಗೆದು ಜ್ಯೂಸ್ ನೀಡಿದ ABVP ಕಾರ್ಯಕರ್ತರು !

Prasthutha|

►ಘಟನೆಯ ಬಳಿಕ ABVP ಕಾರ್ಯಕರ್ತರಿಗೆ ಆಸ್ಪತ್ರೆ ಪ್ರವೇಶ ನಿಷೇಧ ಹೇರಿದ ಆಡಳಿತ ಮಂಡಳಿ !

- Advertisement -

ಡೆಹ್ರಾಡೂನ್ : ಆರೆಸ್ಸೆಸ್ಸಿನ ವಿದ್ಯಾರ್ಥಿ ಸಹ ಸಂಘಟನೆಯಾಗಿರುವ ಅಖಿಲ ಭಾರತ ವಿದ್ಯಾರ್ಥಿ ಪರಿಷತ್ ನ ಕೆಲ ಕಾರ್ಯಕರ್ತರು ಡೆಹ್ರಾಡೂನಿನ ಆಸ್ಪತ್ರೆಯೊಂದರ ಕೋವಿಡ್ ವಾರ್ಡಿಗೆ ತೆರಳಿ ಅಲ್ಲಿನ ಕೋವಿಡ್ ರೋಗಿಗಳಿಗೆ ಹಾಕಿದ್ದ ಆಕ್ಸಿಜನ್ ಪೈಪನ್ನು ತೆಗೆದು ಅವರಿಗೆ ಜ್ಯೂಸ್ ವಿತರಿಸಿರುವ ವೀಡಿಯೋ ಒಂದು ವೈರಲ್ ಆಗಿದ್ದು, ಸದ್ಯ ವಿವಾದಕ್ಕೆ ಕಾರಣವಾಗಿದೆ. ಇವರಿಗೆ ಕೋವಿಡ್ ವಾರ್ಡಿಗೆ ತೆರಳಲು ಅನುಮತಿ ನೀಡಿದವರಾರು ಎಂಬ ಪ್ರಶ್ನೆಯೆದ್ದಿದೆ.

ಆದರೆ ಆಸ್ಪತ್ರೆಯ ಅಧಿಕಾರಿಗಳು ಕೋವಿಡ್ ವಾರ್ಡಿಗೆ ಹೋಗಲು ಅವರಿಗೆ ಅನುಮತಿ ನೀಡಿರಲಿಲ್ಲ ಎಂದು ಮೆಡಿಕಲ್ ಕಾಲೇಜಿ ಆಸ್ಪತ್ರೆಯ ಪ್ರಿನ್ಸಿಪಾಲ್ ಅಶುತೋಶ್ ಸಯಾನಾ ಅವರು ಸ್ಪಷ್ಟಪಡಿಸಿದ್ದಾರೆ. ಕೋವಿಡ್ ವಾರ್ಡ್ ಹೆಚ್ಚಿನ ಅಪಾಯಕಾರಿ ಪ್ರದೇಶವಾಗಿರುತ್ತದೆ. ಅವರು ನಮ್ಮ ಆರೋಗ್ಯ ಕಾರ್ಯಕರ್ತರಿಗೆ ಸಹಾಯ ಮಾಡುತ್ತೇವೆಂದು ಅನುಮತಿ ಕೇಳಿದ್ದರು. ಅದಕ್ಕೆ ಅನುಮತಿ ನೀಡಿದ್ದೆವೆವು. ಆದರೆ ಅವರು ಹೇಗೆ ವಾರ್ಡ್ ಒಳಗೆ ಪ್ರವೇಶ ಪಡೆದರು ಎನ್ನುವುದರ ಕುರಿತು ತನಿಖೆ ನಡೆಸುತ್ತೇವೆಂದು ಸಯಾನಾ ಅವರು ಹೇಳಿದ್ದಾರೆ.

- Advertisement -

ಪಿಪಿಇ ಕಿಟ್ ಧರಿಸಿ ಕೋವಿಡ್ ವಾರ್ಡ್ ಪ್ರವೇಶಿಸಿದ ಎಬಿವಿಪಿ ಸ್ಟಿಕ್ಕರ್ ಹಾಕಿದ್ದ ಕಾರ್ಯಕರ್ತರು ಅಲ್ಲಿನ ರೋಗಿಗಳ ಆಕ್ಸಿಜನ್ ಪೈಪ್ ಕಳಚಿ ಅವರಿಗೆ ಜ್ಯೂಸ್ ವಿತರಿಸಿದ್ದಾರೆ. ಕೋವಿಡ್ ಮಾರ್ಗಸೂಚಿಗಳ ಪ್ರಕಾರ ಆರೋಗ್ಯ ಕಾರ್ಯಕರ್ತರಲ್ಲದೆ ಇತರರಿಗೆ ಕೋವಿಡ್ ವಾರ್ಡಿಗೆ ಪ್ರವೇಶವಿರುವುದಿಲ್ಲ.  ಈ ಘಟನೆ ಬೆಳಕಿಗೆ ಬಂದ ಎಬಿವಿಪಿ ಕಾರ್ಯಕರ್ತರಿಗೆ ಆಸ್ಪತ್ರೆಯ ವಠಾರಕ್ಕೆ ಪ್ರವೇಶ ನಿಷೇಧಿಸಿದ್ದಾರೆ.

Join Whatsapp