‘ಪರೇಶಾನಿ ಪೆ ಚರ್ಚಾ’ ಯಾವಾಗ ನಡೆಸುತ್ತೀರಿ: ಮೋದಿಗೆ ಎನ್.ಸಿ.ಪಿ ಪ್ರಶ್ನೆ

Prasthutha|

ಮುಂಬೈ: ದೇಶದ ನಾಗರಿಕರ ಸಂಕಷ್ಟಗಳನ್ನು ನಿವಾರಿಸುವ ನಿಟ್ಟಿನಲ್ಲಿ ‘ಪರೇಶಾನಿ ಪೆ ಚರ್ಚಾ’ ಕಾರ್ಯಕ್ರಮ ಯಾವಾಗ ನಡೆಸುತ್ತೀರಿ ಎಂದು ಪ್ರಧಾನಿ ಮೋದಿಗೆ ಎನ್.ಸಿ.ಪಿ ಪ್ರಶ್ನಿಸಿದೆ.

- Advertisement -

ಈ ಕುರಿತು ಟ್ವೀಟ್ ಮೂಲಕ ಪ್ರಶ್ನಿಸಿರುವ ವಕ್ತಾರ ಕ್ಲೈಡ್ ಕ್ರಾಸ್ಟೊ, ಪರೀಕ್ಷೆಯ ಸಮಯದಲ್ಲಿ ವಿದ್ಯಾರ್ಥಿಗಳು ಒತ್ತಡಕ್ಕೆ ಒಳಗಾಗುತ್ತಾರೆ. ಇದನ್ನು ದೂರಮಾಡಲು ಅವರೊಂದಿಗೆ ಚರ್ಚೆ ನಡೆಸಿದ್ದಕ್ಕಾಗಿ ಮೋದಿಗೆ ಧನ್ಯವಾದ ತಿಳಿಸುತ್ತೇನೆ. ಆದರೆ ವಿದ್ಯಾರ್ಥಿಗಳ ಪೋಷಕರು ಮತ್ತು ನಾಗರಿಕರ ಸಂಕಷ್ಟಗಳನ್ನು ನಿವಾರಿಸಲು ಪರೇಶಾನಿ ಪೇ ಚರ್ಚಾ’ ಕಾರ್ಯಕ್ರಮವನ್ನು ಯಾವಾಗ ನಡೆಸುತ್ತೀರಿ’ ಎಂದು ಪ್ರಶ್ನಿಸಿದ್ದಾರೆ.

ಸದ್ಯ ದೇಶದಲ್ಲಿ ದಿನನಿತ್ಯ ಇಂಧನ, ಗ್ಯಾಸ್ ಬೆಲೆಯೇರಿಕೆಯಾಗುತ್ತಿದೆ. ನಿರುದ್ಯೋಗ ಸಮಸ್ಯೆ ಯುವಸಮೂಹವನ್ನು ಕಂಗೆಡಿಸಿದೆ. ಇದರ ನಡುವೆ ಕೆಲವು ಸೆಲೆಬ್ರಿಟಿಗಳು ‘ಪರೀಕ್ಷಾ ಪೆ ಚರ್ಚಾ’ ಎಂಬ ಕಾರ್ಯಕ್ರಮವನ್ನು ವೀಕ್ಷಿಸುವಂತೆ ಸಲಹೆ ನೀಡಿದ್ದಾರೆ.

- Advertisement -

ಬೆಲೆಯೇರಿಕೆಯಿಂದ ನಾಗರಿಕರು ತೊಂದರೆ ಅನುಭವಿಸುತ್ತಿರುವ ಸಂದರ್ಭದಲ್ಲಿ ಪ್ರಧಾನಿ ಈ ಬಗ್ಗೆ ಯೋಚಿಸಿದ್ದಾರಾ ಎಂದು ಕ್ರಾಸ್ಟೊ ಪ್ರಶ್ನಿಸಿದ್ದಾರೆ.



Join Whatsapp