ಕೇಜ್ರೀವಾಲ್ ಮನೆ ಮುಂದೆ ಗಲಭೆ: ಸ್ಪಷ್ಟ ವರದಿ ನೀಡಲು ಪೋಲೀಸರಿಗೆ ಸುಪ್ರೀಂ ಕೋರ್ಟ್ ಗಡುವು

Prasthutha|

ಹೊಸದಿಲ್ಲಿ: ದಿಲ್ಲಿ ಮುಖ್ಯಮಂತ್ರಿ ಅರವಿಂದ ಕೇಜ್ರೀವಾಲ್ ಮನೆ ಮುಂದೆ ಭಾರತೀಯ ಜನತಾ ಯುವ ಮೋರ್ಚಾ ಮಾಡಿದ ಗಲಭೆಯ ಬಗೆಗೆ ವಿಶೇಷ ತನಿಖಾ ದಳದಿಂದ ಸ್ವತಂತ್ರ ತನಿಖೆ ಬಯಸಿ ಆಮ್ ಆದ್ಮಿ ಪಕ್ಷದ ಶಾಸಕ ಸೌರಭ್ ಭಾರದ್ವಾಜ್  ಸುಪ್ರೀಂ ಕೋರ್ಟಿಗೆ ಅರ್ಜಿ ಸಲ್ಲಿಸಿದ್ದಾರೆ.

- Advertisement -

ಬಿಜೆಪಿಯ ಯುವ ತಂಡದ 200 ಜನರು ಕೇಜ್ರೀವಾಲ್ ರ ಮನೆಯ ಬ್ಯಾರಿಕೇಡ್, ಗೇಟುಗಳನ್ನು ಮುರಿದು ಗಲಭೆ ನಡೆಸಿದ್ದರು. ಏಪ್ರಿಲ್ 1ರ ಶುಕ್ರವಾರ ಸುಪ್ರೀಂ ಕೋರ್ಟ್  ದಿಲ್ಲಿ ಪೋಲೀಸರಿಗೆ ಎರಡು ವಾರಗಳ ಕಾಲಾವಕಾಶ ಕೊಟ್ಟು ಅಲ್ಲಿಯವರೆಗಿನ ತನಿಖೆಯ ಸಕಲ ಮಾಹಿತಿ ವರದಿ ಮಾಡುವಂತೆ ಹೇಳಿದೆ.

ವಿಭಾಗೀಯ ಬೆಂಚಿನ ಹಂಗಾಮಿ ಮುಖ್ಯ ನ್ಯಾಯಮೂರ್ತಿ ವಿಪಿನ್ ಸಂಘಿ ಮತ್ತು ಜಸ್ಟಿಸ್ ನವೀನ್ ಚಾವ್ಲಾ ಅವರು ದಿಲ್ಲಿ ಪೋಲೀಸರು ಯಾವ ರೀತಿಯ ತನಿಖೆ ನಡೆಸಿದ್ದಾರೆ ಎನ್ನುವುದು ನಮಗೆ ತಿಳಿಯಬೇಕಾಗಿದೆ ಎಂದಿದ್ದಾರೆ.

- Advertisement -

“ನಾವು ವೀಡಿಯೋ ನೋಡಿದೆವು. ಅದು ಕಾನೂನುಬಾಹಿರ ಗುಂಪು. ಅವರ ಮುಖ್ಯಮಂತ್ರಿಗಳ ಮನೆಯ ಗೇಟು ಮತ್ತು ಸಾರ್ವಜನಿಕ ಆಸ್ತಿ ಹಾಳು ಮಾಡಿದ್ದಾರೆ. ಹಲವರು ಕಾನೂನನ್ನು ಕೈಗೆ ತೆಗೆದುಕೊಂಡಿದ್ದರು. ಒಂದು ರೀತಿಯ ಭೀತಿ ಹುಟ್ಟಿಸುವ ಕೃತ್ಯ ಇದು ಎಂಬುದು ತಿಳಿಯುತ್ತದೆ. ಪೋಲೀಸರು ಕರ್ತವ್ಯ ನಿರ್ವಹಿಸಿದಂತಿಲ್ಲ. ಕೆಲವು ಪೋಲೀಸರು ಪ್ರಯತ್ನಿಸಿದರಾದರೂ ಅವರು ಬೆರಳೆಣಿಕೆಯಷ್ಟಿದ್ದರು. ಇಂಥ ಕೃತ್ಯ ಯಾಕಾಗಿ ಎಂಬುದರ ಬಗೆಗೆ ನೀವು ಪೂರ್ಣ ಮಾಹಿತಿ ನೀಡಬೇಕು” ಎಂದು ಸುಪ್ರೀಂ ಕೋರ್ಟ್ ಹೇಳಿದೆ.

Join Whatsapp