ಪಾಲಿಕೆ ಸದಸ್ಯರ ಖಾತೆಗೆ 6000 ರೂಪಾಯಿಯ ಬದಲು ಬಿತ್ತು 6 ಲಕ್ಷ !

Prasthutha|


ದಾವಣಗೆರೆ: ನಗರ ಪಾಲಿಕೆಯ ಮೇಯರ್, ಉಪ ಮೇಯರ್ ಸೇರಿ 50 ಸದಸ್ಯರ ಬ್ಯಾಂಕ್ ಖಾತೆಗಳಿಗೆ ತಲಾ 6 ಲಕ್ಷದಿಂದ 16 ಲಕ್ಷದವರೆಗೆ ಹಣ ಜಮಾವಣೆ ಆಗಿ, ಮತ್ತೆ ಬ್ಯಾಂಕ್ ಗೆ ವಾಪಸ್ಸಾದ ಘಟನೆ  ಬೆಳಕಿಗೆ ಬಂದಿದೆ.

- Advertisement -

ನಗರ ಪಾಲಿಕೆ ಮೇಯರ್, ಉಪ ಮೇಯರ್ ಹಾಗೂ ಆಡಳಿತ- ವಿಪಕ್ಷ ಸದಸ್ಯರು, ನಾಮ ನಿರ್ದೇಶಿತ ಸದಸ್ಯರು ಸೇರಿ ಒಟ್ಟು 50 ಜನರ ಖಾತೆಗಳಿಗೆ 3 ಕೋಟಿಗೂ ಅಧಿಕ ಹಣ ಜಮೆ ಆಗಿದ್ದು, ಬ್ಯಾಂಕ್ ನ ಸಿಬ್ಬಂದಿ ಹಣ ಜಮಾ ಮಾಡುವ ವೇಳೆ ಎರಡು ಸೊನ್ನೆ ಹೆಚ್ಚು ಸೇರಿಕೊಂಡಿದ್ದರಿಂದ  ಅವಾಂತರವಾಗಿದೆ ಎಂದು ತಿಳಿದುಬಂದಿದೆ.

ಇದರಿಂದಾಗಿ ಮೇಯರ್ ಗೆ 16 ಸಾವಿರ, ಉಪ ಮೇಯರ್ ಗೆ 10 ಸಾವಿರ, ಸದಸ್ಯರಿಗೆ ತಲಾ 6 ಸಾವಿರ ರೂ ಗಳಂತೆ ನೀಡಬೇಕಾಗಿದ್ದ ಗೌರವಧನ ಸಾವಿರದ ಬದಲು ಲಕ್ಷ ಲೆಕ್ಕದಲ್ಲಿ ಜಮಾವಣೆಯಾಗಿದೆ.ಈ ಕುರಿತು  ಎಚ್ಚೆತ್ತ ಬ್ಯಾಂಕಿ ಸಿಬ್ಬಂದಿಗಳು ಸದಸ್ಯರ ಖಾತೆಯಲ್ಲಿದ್ದ ಹಣ ಬ್ಲಾಕ್ ಮಾಡಿದ್ದಾರೆ. ನಗರ ಪಾಲಿಕೆಗೆ ಮಾಹಿತಿಯನ್ನು ನೀಡಿ ಸದಸ್ಯರಿಗೆ ಕರೆ ಮಾಡಿ, ಹಣವನ್ನು ವಾಪಸ್ ಪಡೆದಿದ್ದಾರೆ.



Join Whatsapp