ಕೊಚ್ಚಿ: ಮುಸ್ಲಿಮರ ಆತ್ಮೀಯ, ರಾಷ್ಟ್ರೀಯ ನಾಯಕ ಪಾಣಕ್ಕಾಡ್ ಸಯ್ಯಿದ್ ಹೈದರಲಿ ತಂಙಳ್ ನಿಧನರಾದರು.
ಅವರಿಗೆ 74 ವರ್ಷ ವಯಸ್ಸಾಗಿತ್ತು. ಕೆಲವು ದಿನಗಳ ಹಿಂದೆ ಅನಾರೋಗ್ಯಪೀಡಿತರಾದ ಅವರನ್ನು ಕೊಚ್ಚಿ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ ಭಾನುವಾರ ಮಧ್ಯಾಹ್ನ ಚಿಕಿತ್ಸೆ ಫಲಿಸದೆ ಅವರು ನಿಧನರಾಗಿದ್ದಾರೆ.
ಜೂನ್ 15, 1947 ರಂದು ಪಾಣಕ್ಕಾಡ್‌ನ ಕೊಡಪ್ಪನಕ್ಕಲ್ ಮನೆತನದಲ್ಲಿ ಜನಿಸಿದ ಅವರು ದಿವಂಗತ ಮಾಳಿಯೆಕ್ಕಲ್ ಸೈಯದ್ ಅಹ್ಮದ್ ಪೂಕೋಯ ತಂಙಳ್ ಮತ್ತು ಮರಿಯಮ್ ಚೆರಿಂಞಿ ಬೀವಿಯವರ ಮೂರನೇ ಪುತ್ರರಾಗಿದ್ದಾರೆ.
ಆಗಸ್ಟ್ 1, 2009 ರಂದು ಸೈಯದ್ ಮುಹಮ್ಮದಲಿ ಶಿಹಾಬ್ ತಂಙಳ್ ಅವರ ಮರಣದ ನಂತರ, ಹೈದರ್ ಅಲಿ ಶಿಹಾಬ್ ತಂಙಳ್ ಅವರು ಮುಸ್ಲಿಂ ಲೀಗ್’ನ ರಾಜ್ಯಾಧ್ಯಕ್ಷರಾಗಿ ಆಯ್ಕೆಯಾದರು. ಹಲವಾರು ಮೊಹಲ್ಲಾಗಳ ಖಾಝಿಯಾಗಿದ್ದ ಅವರು ಪ್ರಖ್ಯಾತ ಧಾರ್ಮಿಕ ಮತ್ತು ಲೌಕಿಕ ಸಂಸ್ಥೆಗಳ ಅಧ್ಯಕ್ಷರಾಗಿದ್ದರು.
1973 ರಲ್ಲಿ ಸುನ್ನೀ ಸ್ಟುಡೆಂಟ್ ಫೆಡರೇಷನ್ ಅಸ್ತಿತ್ವಕ್ಕೆ ಬಂದಾಗ ಅದರ ಪ್ರಥಮ ರಾಜ್ಯಾಧ್ಯಕ್ಷರಾಗಿ ಆಯ್ಕೆಯಾಗಿದ್ದರು. 2008ರಲ್ಲಿ ಸಮಸ್ತದ ಮುಶಾವರಾ ಸಮಿತಿ ಸದಸ್ಯರಾಗಿ ಆಯ್ಕೆಗೊಂಡು ಬಳಿಕ ಅಕ್ಟೋಬರ್ 2, 2010 ರಂದು ಉಪಾಧ್ಯಕ್ಷರಾಗಿ ಆಯ್ಕೆಯಾದರು.