ಗಾಝಾ ಪಟ್ಟಿಯಲ್ಲಿ ಮತ್ತೆ ಇಸ್ರೇಲ್ ಕ್ರೌರ್ಯ : ಹಲವು ಫೆಲೆಸ್ತೀನಿಯರ ಹತ್ಯೆ !

Prasthutha|

ಗಾಝಾಪಟ್ಟಿ: ಗಾಝಾ ಗಡಿಯಲ್ಲಿ ಇಸ್ರೇಲ್ ಪಡೆಗಳ ಕ್ರೌರ್ಯ ಮತ್ತೆ ಮುಂದುವರಿದೆ. ತನ್ನ ವಿರುದ್ಧ ಪ್ರತಿಭಟಿಸಿದ ಫೆಲೆಸ್ತೀನಿಯನ್ನರನ್ನು ಇಸ್ರೇಲ್ ಪಡೆಗಳು ಹತ್ಯೆ ಮಾಡಿದ್ದಾರೆಂದು ಮಾಧ್ಯಮಗಳು ವರದಿ ಮಾಡಿದೆ.

- Advertisement -

ಶನಿವಾರ ನಡೆದ ಘಟನೆಯಲ್ಲಿ ಹಲವಾರು ಫೆಲೆಸ್ತೀನಿಯನ್ ಜನತೆ ಗಾಯಗೊಂಡಿದ್ದಾರೆ. ಮಾತ್ರವಲ್ಲದೆ ಫೆಲೆಸ್ತೀನ್ ನಾಗರಿಕರಾದ ಒಸಮಾ ಖಾಲೀದ್ ದೇಯಿಕ್ ಅವರು ಇಸ್ರೇಲ್ ಪಡೆಗಳ ಗುಂಡಿಗೆ ಬಲಿಯಾಗಿದ್ದಾರೆ. ಈ ವೇಳೆ ಇಸ್ರೇಲ್ ಪೊಲೀಸ್ ಅಧಿಕಾರಿ ಕೂಡಾ ಗಂಭೀರವಾಗಿ ಗಾಯಗೊಂಡಿದ್ದರು ಎಂದು ಆರೋಗ್ಯ ಸಚಿವಾಲಯ ತಿಳಿಸಿವೆ.

ಈ ಘಟನೆಯಲ್ಲಿ 13 ವರ್ಷ ಪ್ರಾಯದ ಹುಡುಗನೊಬ್ಬನ ತಲೆಗೆ ಗುಂಡು ತಗುಲಿದ ಹಿನ್ನೆಲೆಯಲ್ಲಿ ಆತ ಗಂಭೀರ ಸ್ಥಿತಿಯಲ್ಲಿದ್ದಾನೆ ಎಂದು ಹಮಾಸ್ ತಿಳಿಸಿದೆ. ಇಸ್ರೇಲ್ ಪಡೆಗಳು ಹಮಾಸನ್ನು ಗುರಿಯಾಗಿಸಿ ನಿರಂತರ ವಾಯುದಾಳಿ ನಡೆಸುತ್ತಿದೆಯೆಂದು ಆಂತರಿಕ ಸಚಿವಾಲಯ ತಿಳಿಸಿದೆ.

- Advertisement -

ಹಮಾಸ್ ಮತ್ತು ಇಸ್ರೇಲ್ ನಡುವೆ ಕಳೆದ ಮೇ ತಿಂಗಳಲ್ಲಿ ನಡೆದ 11 ದಿನಗಳ ಸಂಘರ್ಷದ ನಂತರ ಕದನವಿರಾಮ ಘೋಷಿಸಿತ್ತು. ಇದೀಗ ಹಮಾಸ್ ನೆಲೆಗಳ ಮೇಲೆ ಇಸ್ರೇಲ್ ದಾಳಿ ನಡೆಸಿ ಗಾಝಾ ಪಟ್ಟಿಯಲ್ಲಿ ಸಂಘರ್ಷದ ವಾತಾವರಣಕ್ಕೆ ಕಾರಣವಾಗಿದೆ.

ಈ ಹಿಂದೆ ನಡೆದ ಘರ್ಷಣೆಯಲ್ಲಿ 260 ಕ್ಕೂ ಅಧಿಕ ಸಂಖ್ಯೆಯ ಫೆಲೆಸ್ತೀನ್ ಜನರ ಹತ್ಯೆಯಾಗಿತ್ತು ಎಂದು ಹಮಾಸ್ ಅಧಿಕಾರಿಗಳು ತಿಳಿಸಿದ್ದರು. ಇಸ್ರೇಲ್ ಮೇಲೆ ನಡೆದ ಹಮಾಸ್ ರಾಕೆಟ್ ದಾಳಿಯಿಂದಾಗಿ ಸೈನಿಕರು ಸೇರಿದಂತೆ 13 ಜನ ಇಸ್ರೇಲ್ ನಾಗರಿಕರು ಸಾವನ್ನಪ್ಪಿದ್ದರು ಇಸ್ರೇಲ್ ತಿಳಿಸಿತ್ತು.



Join Whatsapp