10 ಮಿಲಿಯಮ್ ಅಫ್ಘಾನ್ ಮಕ್ಕಳಿಗೆ ನೆರವಿನ ಅಗತ್ಯವಿದೆ : ಕಳವಳಕಾರಿ ವರದಿಯನ್ನು ಬಹಿರಂಗಪಡಿಸಿದ ಯುನಿಸೆಫ್

Prasthutha|

ಕಾಬೂಲ್: ಅಫ್ಘಾನಿಸ್ತಾನದ ಹತ್ತು ಮಿಲಿಯನ್ ಮಕ್ಕಳಿಗೆ ಮಾನವೀಯ ನೆರವಿನ ಅಗತ್ಯತೆಯಿದೆ ಎಂದು ಯುನಿಸೆಫ್ ವಿಶ್ವಸಂಸ್ಥೆಯನ್ನು ಎಚ್ಚರಿಸಿದೆ. ಮಾತ್ರವಲ್ಲದೆ ಈ ಸಮಸ್ಯೆಯನ್ನು ಬಗೆಹರಿಸುವ ನಿಟ್ಟಿನಲ್ಲಿ ವಿಶ್ವಸಂಸ್ಥೆಯ ಆಹಾರ ಪ್ರಾಧಿಕಾರವು 200 ಮಿಲಿಯನ್ ಡಾಲರ್ ಸಹಾಯದ ನಿರೀಕ್ಷೆಯಲ್ಲಿದೆ ಎಂದು ತಿಳಿಸಿವೆ. ಅಫ್ಘಾನಿಸ್ತಾನದ ಮಕ್ಕಳು ಈಗಾಗಲೇ ಮಾನವೀಯ ನೆರವಿನಿಂದ ಬದುಕುಳಿದಿದ್ದಾರೆ. ಮಾತ್ರವಲ್ಲ ಈ ವರ್ಷ ಸರಿಸುಮಾರು ಒಂದು ಮಿಲಿಯಲ್ ಜನರು ಅಪೌಷ್ಟಿಕತೆಯ ಸಮಸ್ಯೆಯಿಂದ ಬಳಲುತ್ತಿದ್ದಾರೆ ಎಂಬ ಅಘಾತಕಾರಿ ಅಂಕಿಅಂಶವನ್ನು ಯುನಿಸೆಫ್ ಬಹಿರಂಗಪಡಿಸಿದೆ.

- Advertisement -

ಡಬ್ಲ್ಯು.ಎಫ್.ಪಿ ಯ ಕಾರ್ಯನಿರ್ವಾಹಣಾ ನಿರ್ದೇಶಕ ಡೇವಿಡ್ ಬೀಸ್ಲೆ 14 ದಶಲಕ್ಷ ಅಫ್ಘಾನ್ ಜನರು ಒಟ್ಟು ಜನಸಂಖ್ಯೆಯ ಮೂರನೇ ಒಂದು ಭಾಗದಷ್ಟು ಜನರು ಆಹಾರ ಅಭದ್ರತೆಯನ್ನು ಎದುರಿಸುತ್ತಿದ್ದಾರೆ. ಹಲವಾರು ವರ್ಷಗಳ ಬರ, ಸಂಘರ್ಷ, ಆರ್ಥಿಕ ಕುಸಿತ, ಕೋವಿಡ್ ಹಿನ್ನೆಲೆಯಲ್ಲಿ ಈ ಸಮಸ್ಯೆಯು ತಲೆದೋರಿದೆಯೆಂದು ಹೇಳಲಾಗುತ್ತಿದೆ. ಅದೇ ರೀತಿ ವಿಶ್ವಬ್ಯಾಂಕ್ ಅಫ್ಘಾನಿಸ್ತಾನಕ್ಕೆ ನೀಡುತ್ತಿದ್ದ ಆರ್ಥಿಕ ಸಹಾಯವನ್ನು ಪ್ರಸಕ್ತ ಸಾಲಿನಲ್ಲಿ ಸ್ಥಗಿತಗೊಳಿಸಿದೆ. ಮಾತ್ರವಲ್ಲದೆ ಐ.ಎಮ್.ಎಫ್ ಪಾವತಿಗಳ ವಿತರಣೆಯ ಮೇಲೆ ನಿರ್ಭಂಧ ಹೇರಿದೆಯೆಂದು ಯುನಿವೆಫ್ ಕಳವಳ ವ್ಯಕ್ತಪಡಿಸಿದೆ.

ಈ ಮಧ್ಯೆ ಅಮೆರಿಕ ಅಧ್ಯಕ್ಷ ಬೈಡೆನ್ ಅಫ್ಘಾನಿಸ್ತಾನದಿಂದ ಸೈನ್ಯವನ್ನು ಹಿಂತೆಗೆದುಕೊಳ್ಳಲು ಆಗಸ್ಟ್ 31 ರ ಗಡುವನ್ನು ಹೇರಿದ ನಿಟ್ಟಿನಲ್ಲಿ ಪಾಶ್ಚಿಮಾತ್ಯ ಮಿತ್ರರಾಷ್ಟ್ರಗಳು ಸ್ಥಳಾಂತರಗೊಳ್ಳುವ ಪ್ರಯತ್ನದಲ್ಲಿದೆ. ತಾಲಿಬಾನ್ ಕಾಬೂಲನ್ನು ವಶಪಡಿಸುವ ಮೊದಲು ಆಗಸ್ಟ್ 14 ರಿಂದ ಈಚೆಗೆ ಅಫ್ಘಾನ್ ನಾಗರಿಕರು ಸೇರಿದಂತೆ 70 ಸಾವಿರಕ್ಕೂ ಅಧಿಕ ಸಂಖ್ಯೆಯ ವಿದೇಶಿಯರನ್ನು ಸ್ಥಳಾಂತರಿಸಿದೆ.

- Advertisement -

ರಷ್ಯಾ ಅಧ್ಯಕ್ಷ ವ್ಲಾಡಿಮಿರ್ ಪುಟಿನ್ ಮತ್ತು ಅವರ ಚೀನಾದ ಸಹವರ್ತಿ ಕ್ಸಿ ಜಿನ್‌ಪಿಂಗ್ ಅವರು ಅಫ್ಘಾನಿಸ್ತಾನ ತಾಲಿಬಾನ್ ಸ್ವಾಧೀನಕ್ಕೆ ಬಂದ ನಂತರ “ಬೆದರಿಕೆಗಳನ್ನು” ಎದುರಿಸಲು ತಮ್ಮ ದೇಶಗಳು ಪ್ರಯತ್ನಗಳನ್ನು ಮಾಡುವುದಾಗಿ ಒಪ್ಪಿಕೊಂಡಿದೆಯೆಂದು ಮಾಧ್ಯಮಗಳು ತಿಳಿಸಿವೆ.

ದೂರವಾಣಿಯ ಮೂಲಕ ಮಾತನಾಡಿದ ಈ ಇಬ್ಬರು ನಾಯಕರು “ಅಫ್ಘಾನಿಸ್ತಾನದ ಭೂಪ್ರದೇಶದಿಂದ ಉಂಟಾಗುತ್ತಿರುವ ಭಯೋತ್ಪಾದನೆ, ಮಾದಕವಸ್ತು ಕಳ್ಳಸಾಗಣೆಯ ವಿರುದ್ಧ ಹೋರಾಡಲು ತಾವು ಸಿದ್ಧತೆಯನ್ನು ನಡೆಸಿರುವುದಾಗಿ ಎಂದು ಮಾಧ್ಯಮಕ್ಕೆ ಮಾಹಿತಿ ನೀಡಿದ್ದಾರೆ. ಮಾತ್ರವಲ್ಲದೆ ಅಫ್ಘಾನ್ ನಲ್ಲಿ ಶಾಂತಿಯನ್ನು ಮರು ಸ್ಥಾಪಿಸುವ ಮತ್ತು ಪ್ರಸಕ್ತವಾಗಿ ಅಸ್ಥಿರತೆ ಹರಡುವಿಕೆಯನ್ನು ತಡೆಗಟ್ಟುವ ಕುರಿತು ಉಭಯ ನಾಯಕರು ಚರ್ಚಿಸಿದರು.

Join Whatsapp