ಇಸ್ರೇಲ್ ದಾಳಿಗೆ ಫೆಲೆಸ್ತೀನ್ ನಾಗರಿಕ ಬಲಿ, ನೂರಾರು ಮಂದಿಗೆ ಗಾಯ

Prasthutha|

ಟೆಲ್ ಅವೀವ್: ಪಶ್ಚಿಮ ದಂಡೆಯಲ್ಲಿ ಫೆಲೆಸ್ತೀನ್ ಪ್ರತಿಭಟನಾಕಾರರು ಮತ್ತು ಇಸ್ರೇಲ್ ಸೈನಿಕರ ನಡುವಿನ ಘರ್ಷಣೆ ಏರ್ಪಟ್ಟು ಫೆಲೆಸ್ತೀನ್ ನಾಗರಿಕರೊಬ್ಬರು ಸಾವನ್ನಪ್ಪಿದ್ದಾರೆ. ಮಾತ್ರವಲ್ಲ ಇಸ್ರೇಲ್ ನಡೆಸಿದ ದಾಳಿಯಿಂದಾಗಿ ನೂರಾರು ಮಂದಿ ಗಾಯಗೊಂಡಿದ್ದಾರೆ ಎಂದು ಆಸ್ಪತ್ರೆ ಮೂಲಗಳು ತಿಳಿಸಿವೆ.

ಇಸ್ರೇಲ್ ಸೈನಿಕರು ನಡೆಸಿದ ಅಮಾನವೀಯ ದಾಳಿಗೆ ಫೆಲೆಸ್ತೀನ್ ಮೂಲದ ಮುಹಮ್ಮದ್ ಖಬೀಸಾ ಎಂಬವರು ಮೃತಪಟ್ಟಿದ್ದಾರೆ ಎಂದು ಫೆಲೆಸ್ತೀನ್ ಆರೋಗ್ಯ ಸಚಿವಾಲಯ ತನ್ನ ಹೇಳಿಕೆಯಲ್ಲಿ ತಿಳಿಸಿದೆ.

- Advertisement -

ಇಸ್ರೇಲ್ ನ ವಸಾಹತುಷಾಹಿತ್ವ ಧೋರಣೆ ಮತ್ತು ಫೆಲೆಸ್ತೀನ್ ಭೂಮಿಯನ್ನು ವಶಪಡಿಸಿಕೊಳ್ಳುವುದನ್ನು ವಿರೋಧಿಸಿ ಆಯೋಜಿಸಲಾಗಿದ್ದ ಪ್ರತಿಭಟನೆಯಲ್ಲಿ ಈ ಘಟನೆ ನಡೆದಿದೆ ಎಂದು ಪ್ರತ್ಯಕ್ಷದರ್ಶಿಗಳು ತಿಳಿಸಿದ್ದಾರೆ.

- Advertisement -