ಅಸ್ಸಾಮ್ ಘಟನೆಯಲ್ಲಿ ಪಿ.ಎಫ್.ಐ ಕೈವಾಡವೆಂದ ಬಿಜೆಪಿ!

Prasthutha|

ಗುವಾಹಟಿ: ಪಾಪ್ಯುಲರ್ ಫ್ರಂಟ್ ಆಫ್ ಇಂಡಿಯಾ (ಪಿ.ಎಫ್.ಐ) ಸೇರಿದಂತೆ ವಿವಿಧ ಸಂಘಟನೆಗಳು ಪ್ರತಿಭಟನಾಕಾರರನ್ನು ಅಸ್ಸಾಂ ಪೊಲೀಸರ ಮೇಲೆ ದಾಳಿ ಮಾಡಲು ಪ್ರೇರೇಪಿಸಿದೆ. ಈ ಹಿನ್ನೆಲೆಯಲ್ಲಿ ದರ್ರಾಂಗ್ ಮಂಗಳಾದೈ ಪಟ್ಟಣದ ಗೋರುಖುಟಿ ಎಂಬಲ್ಲಿ ಪೊಲೀಸರ ಗುಂಡಿಗೆ ಇಬ್ಬರು ಬಲಿಯಾಗಲು ಪ್ರಮುಖ ಕಾರಣ ಎಂದು ಬಿಜೆಪಿ ಆರೋಪಿಸಿದೆ.

- Advertisement -

ಅಸ್ಸಾಮ್ ಘಟನೆಗೆ ಸಂಬಂಧಿಸಿದಂತೆ ಪ್ರತಿಕ್ರಿಯಿಸಿದ ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ದಿಲೀಪ್ ಸೈಕಿಯಾ ಪ್ರತಿಭಟನಾಕಾರರ ವಿರುದ್ಧ ಸರ್ಕಾರದ ಕ್ರಮ ತೃಪ್ತಿಯಾಗಿಲ್ಲ. ಈ ಪ್ರತಿಭಟನೆಯಲ್ಲಿ ಕನಿಷ್ಠ 500 ಮಂದಿಗೆ ಗಾಯಗೊಳ್ಳಬೇಕಿತ್ತು ಎಂದು ಅವರು ತಿಳಿಸಿದರು.

ಈ ಮಧ್ಯೆ ಗೋರುಖುಟಿಯಲ್ಲಿ ನಡೆದ ಪ್ರತಿಭಟನೆ ಪಿ.ಎಫ್.ಐ ಸಂಘಟನೆಯನ್ನು ಹೋಲುತ್ತಿದೆ. ಪಿ.ಎಫ್.ಐ ರಾಷ್ಟ್ರಾದ್ಯಂತ ಅಶಾಂತಿಯನ್ನು ಸೃಷ್ಟಿಸುವ ಗುರಿಯನ್ನು ಹೊಂದಿದೆ ಎಂದು ದಾರಂಗ್ ಸಂಸದ ಸೈಕಿಯಾ ಸುದ್ದಿಗಾರರೊಂದಿಗೆ ಮಾತನಾಡುತ್ತಾ ತಿಳಿಸಿದರು. ಈ ನಿಟ್ಟಿನಲ್ಲಿ ಸರ್ಕಾರ ಪಿ.ಎಫ್.ಐ ಸಂಘಟನೆಯನ್ನು ಕೇಂದ್ರೀಕರಿಸಿ ತನಿಖೆ ನಡೆಸಲಿ ಎಂದು ಅವರು ಒತ್ತಾಯಿಸಿದರು.

- Advertisement -

ಅಸ್ಸಾಮ್ ಜನತೆಯನ್ನು ಒಕ್ಕಲೆಬ್ಬಿಸುವ ಸರ್ಕಾರದ ನಡೆಯನ್ನು ಖಂಡಿಸಿ ದರುಂಗ್ ಜಿಲ್ಲೆಯ ಸಿಫಾಜರ್ ವ್ಯಾಪ್ತಿಯ ಗೋರುಖುಟ್ ಮತ್ತು ಇನ್ನಿತರ ಗ್ರಾಮಗಳಲ್ಲಿ ಪ್ರತಿಭಟನೆ ನಡೆಸಿದ ಜನರ ಮೇಲೆ ಅಸ್ಸಾಮ್ ಪೊಲೀಸರು ಗುಂಡು ಹಾರಿಸಿದ ಪರಿಣಾಮ ಇಬ್ಬರು ಮೃತಪಟ್ಟು ಕನಿಷ್ಠ 20 ಮಂದಿ ಗಾಯಗೊಂಡಿದ್ದರು.

ಅಸ್ಸಾಂ ಘಟನೆಯಲ್ಲಿ ಪಿ.ಎಫ್.ಐ ಸಂಘಟನೆಯ ಕೈವಾಡವಿದೆ ಎಂಬ ಬಿಜೆಪಿ ಆರೋಪವನ್ನು ಪಾಪ್ಯುಲರ್ ಫ್ರಂಟ್ ಆಫ್ ಇಂಡಿಯಾ ಅಸ್ಸಾಂ ಘಟಕ ತಳ್ಳಿ ಹಾಕಿದೆ. ಮಾತ್ರವಲ್ಲ ಸಾಮಾಜಿಕ ಸಂಘಟನೆ ಪಿ.ಎಫ್.ಐ ವಿರುದ್ಧ ಬಿಜೆಪಿಯ ಆರೋಪ ನಿರಾಧಾರವಾಗಿದ್ದು, ಗೋರುಖುತಿ ಪ್ರದೇಶದಲ್ಲಿ ನಮ್ಮ ಸಂಘಟನೆ ಯಾವುದೇ ಸದಸ್ಯರನ್ನು ಹೊಂದಿಲ್ಲ ಎಂದು ರಾಜ್ಯಾಧ್ಯಕ್ಷ ಅಬು ಶಮಾ ಅಹ್ಮದ್ ಸುದ್ದಿಗಾರರಿಗೆ ತಿಳಿಸಿದ್ದಾರೆ.

ಅಸ್ಸಾಂ ಸರ್ಕಾರ ಈಗಾಗಲೇ ಘಟನೆಯನ್ನು ಗೌಹಾಟಿ ಹೈಕೋರ್ಟ್ ನಿವೃತ್ತ ನ್ಯಾಯಾಧೀಶರಿಂದ ತನಿಖೆ ನಡೆಸುವುದಾಗಿ ಘೋಷಿಸಿದೆ.

Join Whatsapp