ಸೌದಿ ಅರೇಬಿಯಾ: ಮಸೀದಿಯಲ್ಲಿ ರಾಜಕೀಯ ಘೋಷಣೆ ಕೂಗಿದ ಪಾಕಿಸ್ತಾನಿ ಪ್ರಜೆಗಳ ಬಂಧನ

Prasthutha|

ಮದೀನಾ (ಸೌದಿ ಅರೇಬಿಯಾ): ಮಸ್ಜಿದ್ ಅನ್ ನಬವಿಯ ಪಾವಿತ್ರ್ಯವನ್ನು ಉಲ್ಲಂಘಿಸಿದ ಪಿಟಿಐ (ಪಾಕಿಸ್ತಾನ್ ತೆಹ್ರೀಕ್-ಇ-ಇನ್ಸಾಫ್) ಬೆಂಬಲಿಗರನ್ನು ಸೌದಿ ಅಧಿಕಾರಿಗಳು ಬಂಧಿಸಿದ್ದಾರೆ.

- Advertisement -

ಮಸೀದಿಯಲ್ಲಿ ರಾಜಕಿಯ ಘೋಷಣೆ ಕೂಗಿದ ಆರೋಪದಲ್ಲಿ ಐದು ಮಂದಿ ಪಾಕ್ ಪ್ರಜೆಗಳನ್ನು ಬಂಧಿಸಲಾಗಿದ್ದು, ಆರೋಪಿಗಳಿಗೆ 5 ವರ್ಷ ಜೈಲು ಶಿಕ್ಷೆ, 60,000 ರಿಯಾಲ್ ಗಳನ್ನು ದಂಡ ಮತ್ತು ಹಜ್ ಮತ್ತು ಉಮ್ರಾಗೆ ಆಜೀವ ನಿಷೇಧ ವಿಧಿಸಲಾಗಿದೆ.

ಘೋಷಣೆಗಳನ್ನು ಕೂಗಿದ ಪಾಕಿಸ್ಥಾನಿ ಪ್ರಜೆಗಳ ವಿರುದ್ಧ ಸಮಗ್ರ ತನಿಖೆಯ ನಂತರ ಜೀವಾವಧಿ ಶಿಕ್ಷೆಗೆ ಗುರಿಪಡಿಸುವ ಸಾಧ್ಯತೆಯೂ ಇದೆ ಎಂದು ಇಸ್ಲಾಮಿಕ್ ಇನ್ಪೋರ್ಮೇಶನ್ ವರದಿ ಮಾಡಿದೆ. ಇತ್ತೀಚೆಗಷ್ಟೆ ಮಸ್ಜಿದ್ ನಬವಿಗೆ ಪಾಕಿಸ್ತಾನದ ನೂತನ ಪ್ರಧಾನಿ ಶೆಹಬಾಝ್ ಶರೀಫ್ ಭೇಟಿ ನೀಡಿದ್ದರು. ಈ ವೇಳೆ ಪಿಟಿಐ ಬೆಂಬಲಿಗರು ಪ್ರಧಾನಿ ವಿರುದ್ಧ “ಚೋರ್ ಚೋರ್’’ ಎಂದು ಘೋಷಣೆ ಕೂಗುವ ವಿಡಿಯೋ ವೈರಲ್ ಆಗಿತ್ತು.

Join Whatsapp