ಲಕ್ನೋ: ಹರಿದ್ವಾರದಲ್ಲಿ ನಡೆದ ಧರ್ಮ ಸಂಸತ್ ಕಾರ್ಯಕ್ರಮದಲ್ಲಿ ಮುಸ್ಲಿಮರ ವಿರುದ್ಧ ಹಿಂಸಾಚಾರ ಮತ್ತು ಹತ್ಯೆಗೆ ಕರೆ ನೀಡಿದ ಘಟನೆಗೆ ಸಂಬಂಧಿಸಿದಂತೆ ಪ್ರತಿಕ್ರಿಯಿಸುವಂತೆ ಭಾರತೀಯ ರಾಯಭಾರಿಗೆ ಪಾಕಿಸ್ತಾನ ಸಮನ್ಸ್ ಜಾರಿಗೊಳಿಸಿದೆ.
ಇಸ್ಲಾಮಾಬಾದ್ ನಲ್ಲಿರುವ ರಾಯಭಾರಿ ಕಚೇರಿಗೆ ಆಗಮಿಸಿದ ಪಾಕಿಸ್ತಾನದ ಅಧಿಕಾರಿಗಳು ಭಾರತದ ಹಿರಿಯ ರಾಜತಾಂತ್ರಿಕರಿಂದ ಮಾಹಿತಿ ನೀಡುವಂತೆ ಕೋರಿ ಸಮನ್ಸ್ ನೀಡಿದೆ ಎಂದು ಹೇಳಲಾಗಿದೆ.
ಈ ಕುರಿತು ತನ್ನ ಅಧಿಕೃತ ಹೇಳಿಕೆಯಲ್ಲಿ ಪಾಕಿಸ್ತಾನ ಸಚಿವಾಲಯ, ಇಂದು ಇಸ್ಲಾಮಾಬಾದ್ ನ ವಿದೇಶಾಂಗ ವ್ಯವಹಾರಗಳ ಸಚಿವಾಲಯಕ್ಕೆ ಭಾರತೀಯ ರಾಯಬಾರಿಯ ಉಸ್ತುವಾರಿ ಎಂ. ಸುರೇಶ್ ಅವರನ್ನು ಕರೆಸಲಾಯಿತು ಮತ್ತು ಹಿಂದುತ್ವವಾದಿಗಳಿಂದ ಭಾರತೀಯ ಮುಸ್ಲಿಮರ ವಿರುದ್ಧ ವ್ಯಾಪಕವಾಗಿ ನಡೆಯುತ್ತಿರುವ ನರಮೇಧದ ಕುರಿತು ಪಾಕಿಸ್ತಾನ ಸರ್ಕಾರ ಗಂಭೀರ ಕಳವಳವನ್ನು ವ್ಯಕ್ತಪಡಿಸಿದೆ. ಈ ಬಗ್ಗೆ ವರದಿ ನೀಡುವಂತೆ ಭಾರತೀಯ ರಾಯಬಾರಿಗೆ ಸೂಚಿಸಿದೆ.
ಡಿಸೆಂಬರ್ 17 ರಿಂದ 19 ರವರೆಗೆ ನಡೆದ ಹರಿದ್ವಾರದಲ್ಲಿ ನಡೆದ ಕಾರ್ಯಕ್ರಮದಲ್ಲಿ ಗಾಝಿಯಾಬಾದ್ ನ ಸಂಘಪರಿವಾರದ ಮುಖಂಡ ಯತಿ ನರಸಿಂಹಾನಂದ ಎಂಬಾತ ಮುಸ್ಲಿಮರ ವಿರುದ್ಧ ಹಿಂಸಾಚಾರ ಮತ್ತು ಹತ್ಯೆ ನಡೆಸುವಂತೆ ಕರೆ ನೀಡಿದ್ದನು. 2029 ರಲ್ಲಿ ಮುಸ್ಲಿಮ್ ವ್ಯಕ್ತಿ ಪ್ರಧಾನಿಯನ್ನಾಗುವುದನ್ನು ತಡೆಯುವಂತೆ ಒತ್ತಾಯಿಸಿದ್ದನು. ಇದರ ವಿರುದ್ಧ ಯತಿ ನರಸಿಂಹಾನಂದ ಸೇರಿದಂತೆ ಹಲವರ ವಿರುದ್ಧ ಐಪಿಸಿ 153 ( ಎ ) ಅಡಿಯಲ್ಲಿ ಪ್ರಕರಣ ದಾಖಲಿಸಲಾಗಿತ್ತು.
ನಮ್ಮ ಯೂಟ್ಯೂಬ್ ಚಾನೆಲನ್ನು Subscribe ಮಾಡಿ : Prasthutha News