ಮಥುರಾ ವನ್ನು ಮುಜಾಫರ್‌ನಗರ ಆಗಲು ಬಿಡದಿರಿ: ರಾಕೇಶ್ ಟಿಕಾಯತ್

Prasthutha|

ಲಕ್ನೋ : ಉತ್ತರ ಪ್ರದೇಶ ವಿಧಾನಸಭೆ ಚುನಾವಣೆ ನಡುವೆ ಮಥುರಾದಲ್ಲಿ ಮಾತನಾಡಿರುವ ಭಾರತೀಯ ಕಿಸಾನ್ ಒಕ್ಕೂಟದ ಮುಖ್ಯಸ್ಥ ರಾಕೇಶ್ ಟಿಕಾಯತ್, “ಈ ಯಾತ್ರಾ ನಗರದಲ್ಲಿ ಶಾಂತಿ ಕದಡಲು ಬಯಸುವ ಕೆಲವು ಶಕ್ತಿಗಳನ್ನು ಯಶಸ್ವಿಯಾಗಲು ಬಿಡಬೇಡಿ,” ಎಂದು ಜನರಿಗೆ ಎಚ್ಚರಿಕೆ ನೀಡಿದ್ದಾರೆ.

- Advertisement -

ಯಾವುದೇ ಪಕ್ಷವನ್ನು ಹೆಸರಿಸದೆ, “ಅವರಿಗೆ ಮತಗಳು ಸಿಗುತ್ತಿಲ್ಲ, ಆದ್ದರಿಂದ, ಜನರು ಶಾಂತಿಯುತವಾಗಿ ಪ್ರಾರ್ಥನೆ ಸಲ್ಲಿಸುತ್ತಾ ಸಾಮಾನ್ಯ ಜೀವನ ನಡೆಯುತ್ತಿರುವ ಈ ತೀರ್ಥಯಾತ್ರೆಯ ನಗರದಲ್ಲಿ ಶಾಂತಿ ಕದಡಲು ಅವರು ಪ್ರಯತ್ನಿಸುತ್ತಿದ್ದಾರೆ,” ಎಂದಿದ್ದಾರೆ.ಮಥುರಾ ನಗರದಲ್ಲಿ ವಾತಾವರಣವನ್ನು ಮುಜಾಫರ್‌ನಗರದಂತೆ ಮಾಡಲು ಹೊರಟಿರುವವರ ಪ್ರಯತ್ನವನ್ನು ಜನರು ವಿಫಲಗೊಳಿಸಬೇಕು,” ಎಂದು ಭಾರತೀಯ ಕಿಸಾನ್ ಒಕ್ಕೂಟದ ಮುಖ್ಯಸ್ಥ ರಾಕೇಶ್ ಟಿಕಾಯತ್ ಕರೆ ನೀಡಿದ್ದಾರೆ.

“ನೀವು ಅವರ ಬಲೆಗೆ ಬೀಳಬೇಡಿ. ಇಲ್ಲದಿದ್ದರೆ ಹೆಚ್ಚಿನ ಜನರು ನಿರುದ್ಯೋಗಿಗಳಾಗುತ್ತಾರೆ. ಏಕೆಂದರೆ ಉದ್ಯೋಗ ಅವಕಾಶಗಳು ಕುಂಠಿತಗೊಳ್ಳುತ್ತವೆ. ಮಥುರಾ ಎಂಬ ನಗರವೇ ಗಲಭೆಯಲ್ಲಿ ಮುಳುಗಿ ಹೋಗುತ್ತದೆ,” ಎಂದು ರಾಕೇಶ್ ಟಿಕಾಯತ್ ಹೇಳಿದ್ದಾರೆ.

- Advertisement -

ನಮ್ಮ ಯೂಟ್ಯೂಬ್ ಚಾನೆಲನ್ನು Subscribe ಮಾಡಿ : Prasthutha News



Join Whatsapp