ಟಿ20 ವಿಶ್ವಕಪ್‌ | ಪಾಕಿಸ್ತಾನ ವಿರುದ್ಧ ಜಿಂಬಾಬ್ವೆಗೆ 1 ರನ್‌ಗಳ ವೀರೋಚಿತ ಜಯ

Prasthutha|

​​​​​​​ಪರ್ತ್‌: ಟಿ20 ವಿಶ್ವಕಪ್‌ನ ಅಚ್ಚರಿಯ ಫಲಿತಾಂಶವೊಂದರಲ್ಲಿ ದುರ್ಬಲ ಜಿಂಬಾಬ್ವೆ, ಬಲಿಷ್ಠ ಪಾಕಿಸ್ತಾನ ತಂಡವನ್ನು ತಂಡವನ್ನು 1 ರನ್‌ಗಳ ಅಂತರದಲ್ಲಿ ರೋಚಕವಾಗಿ ಮಣಿಸಿದೆ.

- Advertisement -

ಟಾಸ್‌ ಗೆದ್ದು ಮೊದಲು ಬ್ಯಾಟ್‌ ಮಾಡಿದ್ದ  ಜಿಂಬಾಬ್ವೆ, 8 ವಿಕೆಟ್‌ ನಷ್ಟದಲ್ಲಿ 130 ರನ್‌ಗಳಿಸಿತ್ತು. ಆದರೆ ಸಾಮಾನ್ಯ ಮೊತ್ತವಾಗಿದ್ದರೂ ಧೃತಿಗೆಡದ ಜಿಂಬಾಬ್ವೆ ಬೌಲರ್‌ಗಳು, ಬಲಿಷ್ಠ ಪಾಕಿಸ್ತಾನ ಬ್ಯಾಟ್ಸ್‌ಮನ್‌ಗಳನ್ನು 129 ರನ್‌ಗಳಿಗೆ ನಿಯಂತ್ರಿಸಿದರು. ಆ ಮೂಲಕ 1 ರನ್‌ಗಳ ರೋಚಕ ಗೆಲುವು ಸಾಧಿಸಿತು. ಮತ್ತೊಂದೆಡೆ ಆಸ್ಟ್ರೇಲಿಯಾ ನೆಲದಲ್ಲಿ ಆಡಿದ ಕಳೆದ 6 ಟಿ20 ಪಂದ್ಯಗಳಲ್ಲಿ ಪಾಕಿಸ್ತಾನ ಆರರಲ್ಲೂ ಸೋಲು ಅನುಭವಿಸಿದ ದಾಖಲೆ ಬರೆದಿದೆ.

ಪಾಕಿಸ್ತಾನ ಗೆಲುವಿಗೆ ಅಂತಿಮ 6 ಎಸೆತಗಳಲ್ಲಿ 11 ರನ್‌ಗಳ ಅಗತ್ಯವಿತ್ತು. ಬ್ರಾಡ್‌ ಇವಾನ್ಸ್‌ ಎಸೆದ ಓವರ್‌ನ ಮೊದಲ ಎರಡು ಎಸೆತಗಳಲ್ಲಿ 7 ರನ್‌ ಬಿಟ್ಟುಕೊಟ್ಟರು. ಮುಂದಿನ 4 ಎಸೆತಗಳಲ್ಲಿ4 ರನ್‌ಗಳ ಗೆಲುವಿನ ಗುರಿ ಪಾಕ್‌ ಮುಂದಿತ್ತು. ಇನ್ನೇನು ಪಂದ್ಯ ಗೆದ್ದೇ ಬಿಟ್ಟೇವು ಎಂಬ ಹುಮ್ಮಸ್ಸಿನಲ್ಲಿದ್ದ ಪಾಕಿಸ್ತಾನಕ್ಕೆ, ಬ್ರಾಡ್‌ ಇವಾನ್ಸ್‌ ಶಾಕ್‌ ನೀಡಿದರು. ಮುಂದಿನ ನಾಲ್ಕು ಎಸೆತಗಳಲ್ಲಿ ಕೇವಲ 2 ರನ್‌ ಬಿಟ್ಟುಕೊಟ್ಟ ಇವಾನ್ಸ್‌, 5ನೇ ಎಸೆತದಲ್ಲಿ ಮುಹಮ್ಮದ್‌ ನವಾಝ್‌ ವಿಕೆಟ್‌ ಪಡೆದರು. ಅಂತಿಮ ಎಸೆತದಲ್ಲಿ 3 ರನ್‌ ಬೇಕಿತ್ತು. ಒಂಟಿ ರನ್‌ ಪೂರೈಸಿ 2ನೇ ರನ್‌ಗೆ ಪ್ರಯತ್ನಿಸಿದ  ಶಾಹಿನ್‌ ಆಫ್ರಿದಿ ರನೌಟ್‌ಗೆ ಬಲಿಯಾದರು. ಪಾಕಿಸ್ತಾನಕ್ಕೆ ಆಕಾಶವೇ ತಲೆ ಮೇಲೆ ಬಿದ್ದ ಅನುಭವವಾದರೆ, ಜಿಂಬಾಬ್ವೆ ಪಾಳಯದಲ್ಲಿ ವಿಶ್ವಕಪ್‌ ಗೆದ್ದಷ್ಟೇ ಸಂಭ್ರಮ ಮನೆಮಾಡಿತ್ತು.

Join Whatsapp