MRPL ತ್ಯಾಜ್ಯ ಪರಿಣಾಮ? ಸುಟ್ಟು ಹೋದ ಭತ್ತದ ಮೊಳಕೆ

Prasthutha|

ಮಂಗಳೂರು : ಸೂರಿಂಜೆ ಮತ್ತು ಕುತ್ತೆತ್ತೂರಿನಲ್ಲಿ ಭತ್ತದ ಬೆಳೆಗೆ ನೇಜಿ ಹಾಕಿದ ಸುಮಾರು ಆರು ಕಳಸೆ ಗದ್ದೆಯ ಬೀಜ ಮೊಳಕೆ ಹಂತದಲ್ಲಿ ಸುಟ್ಟು ಹೋಗಿದ್ದು MRPL ನಿಂದ ಹರಿದು ಬಂದ ಕೆಮಿಕಲ್ ಯುಕ್ತ ನೀರು ಇದಕ್ಕೆ ಕಾರಣ ಎಂದು ರೈತರು ಭೀತಿ ವ್ಯಕ್ತಪಡಿಸಿದ್ದಾರೆ.

- Advertisement -

ಬೊಳ್ಳಾರ ಗುತ್ತಿನ ಪ್ರಕಾಶ್ ಶೆಟ್ಟಿ ಎಂಬವರು ಕೃಷಿ ಇಲಾಖೆಯಿಂದ ಪಡೆದ ಭತ್ತವನ್ನು ಮೊಳಕೆ ಬರಿಸಿ ಬಿತ್ತಿದ್ದರು. ಇನ್ನೊರ್ವ ರೈತ ತಾನೇ ಸಿದ್ದಪಡಿಸಿದ ಭತ್ತವನ್ನು ಮೊಳಕೆ ಬರಿಸಿ ಬಿತ್ತಿದ್ದರು. ಇಬ್ಬರು ರೈತರು ಬಿತ್ತಿದ ಬೀಜವೂ ಸುಟ್ಟು ಕಪ್ಪು ಕಪ್ಪಾಗಿ ಹೋಗಿದೆ

MRPL ಬಳಿಯ ಮೂಡುಪದವು ಸಮೀಪ ಒಸರುವ ತ್ಯಾಜ್ಯ ನೀರು ಕುತ್ತೆತ್ತೂರು ಮೂಲಕ ಹರಿದು ಸೂರಿಂಜೆಗೆ ಬರುತ್ತದೆ. ಇದರ ಪರಿಣಾಮ ಇಲ್ಲಿ ಕೃಷಿಗೆ ತೊಂದರೆಯಾಗಿ ರೈತರು ಕೃಷಿ ಮಾಡುವುದನ್ನೇ ಬಿಟ್ಟಿದ್ದಾರೆ. ಈಗ ಸೂರಿಂಜೆ ರೈತರು ಮಾಡಿದ ಕೃಷಿ ಯತ್ನ ವಿಫಲವಾಗಿದೆ ಎನ್ನಲಾಗಿದೆ.

- Advertisement -

ಇತ್ತೀಚೆಗೆ ಪೊನ್ನಗಿರಿ ಮಹಾಲಿಂಗೇಶ್ವರ ದೇವಳದ ಬಳಿ ನೀರಿನಲ್ಲಿ ತೈಲದ ಅಂಶ ಕಂಡು ಬಂದಿದ್ದು, ಮೀನುಗಳು ಸತ್ತಿದ್ದವು. ಇಲ್ಲಿಂದ ನೀರಿನ ಸ್ಯಾಂಪಲ್ ಸಂಗ್ರಹಿಸಲಾಗಿತ್ತು. ಆದರೆ ಅದರ ಫಲಿತಾಂಶ ಇನ್ನೂ ಜನತೆಗೆ ತಿಳಿದಿಲ್ಲ ಎಂದು ರೈತರು ಅಸಮಾಧಾನ ವ್ಯಕ್ತಪಡಿಸಿದ್ದಾರೆ.

Join Whatsapp