ಷರತ್ತಿಗೆ ಒಪ್ಪಿದರೆ ಸಮಾಜವಾದಿ ಪಕ್ಷದೊಂದಿಗೆ ಮೈತ್ರಿ ಮಾಡಿಕೊಳ್ಳಲು ಸಿದ್ಧ: ಓವೈಸಿ

Prasthutha|

ಹೊಸದಿಲ್ಲಿ: ಉತ್ತರ ಪ್ರದೇಶದ ವಿಧಾನಸಭಾ ಚುನಾವಣೆಗೆ ಮುನ್ನ ರಾಜಕೀಯ ಪಕ್ಷಗಳು ನಿರ್ಣಾಯಕ ಹೆಜ್ಜೆ ಇಡುತ್ತಿದ್ದು, ತಮ್ಮ ಏಕೈಕ ಷರತ್ತನ್ನು ಒಪ್ಪಿಕೊಂಡರೆ ಚುನಾವಣೆಯಲ್ಲಿ ಸಮಾಜವಾದಿ ಪಕ್ಷದೊಂದಿಗೆ ಮೈತ್ರಿ ಮಾಡಿಕೊಳ್ಳಲು ಸಿದ್ಧ ಎಂದು ಆಲ್ ಇಂಡಿಯಾ ಮಜ್ಲಿಸ್-ಎ-ಇತ್ತಿಹಾದುಲ್ ಮುಸ್ಲೀಮೀನ್ (AIMIM) ನಾಯಕ ಅಸಾದುದ್ದೀನ್ ಓವೈಸಿ ಹೇಳಿದ್ದಾರೆ.

- Advertisement -

ರಾಜ್ಯದ ಉಪಮುಖ್ಯಮಂತ್ರಿ ಸ್ಥಾನವನ್ನು ಮುಸ್ಲಿಮರಿಗೆ ಮೀಸಲಿಡಬೇಕು ಎಂದು ಓವೈಸಿ ಕೇಳಿಕೊಂಡಿದ್ದಾರೆ. ಪ್ರಸ್ತುತ ಓಂ ಪ್ರಕಾಶ್ ರಾಜ್ಭಾರಿ ನೇತೃತ್ವದ ಭಗಿದಾರಿ ಸಂಕಲ್ಪ್ ಮೋರ್ಚಾದೊಂದಿಗೆ ಒವೈಸಿ ಮೈತ್ರಿ ಮಾಡಿಕೊಂಡಿದ್ದರು. ಭಾರತೀಯ ವಂಚಿತ್ ಸಮಾಜ್ ಪಕ್ಷ, ಭಾರತೀಯ ಮಾನವ್ ಸಮಾಜ್ ಪಕ್ಷ, ಜನತಾ ಕ್ರಾಂತಿ ಪಕ್ಷ ಮತ್ತು ರಾಷ್ಟ್ರ ಉದಯ್ ಪಕ್ಷದಂತಹ ಸಂಘಟನೆಗಳ ಒಕ್ಕೂಟವಾಗಿದೆ ಭಗಿದಾರಿ ಸಂಕಲ್ಪ್ ಮೋರ್ಚಾ.

ಈ ತಿಂಗಳ ಆರಂಭದಲ್ಲಿ AIMIM ನಾಯಕ ಅಝೀಮ್ ವಖಾರ್ ಅವರು ರಾಜ್ಯದ ಉಪಮುಖ್ಯಮಂತ್ರಿ ಹುದ್ದೆಯನ್ನು ಮುಸ್ಲಿಮರಿಗೆ ಮೀಸಲಿಡಬೇಕು ಎಂದು ಹೇಳಿದ್ದರು. ಕಾಂಗ್ರೆಸ್, ಬಹುಜನ ಸಮಾಜ ಪಕ್ಷ ಮತ್ತು ಸಮಾಜವಾದಿ ಪಕ್ಷ ಈ ವಿಷಯದ ಬಗ್ಗೆ ತಮ್ಮ ನಿಲುವನ್ನು ತಿಳಿಸುವಂತೆ ಅವರು ಈ ವೇಳೆ ಕೇಳಿದ್ದರು.

- Advertisement -

ತಮ್ಮ ಪಕ್ಷವು ಸಣ್ಣ ಪಕ್ಷಗಳೊಂದಿಗೆ ಮೈತ್ರಿ ಮಾಡಿಕೊಳ್ಳಲಿದೆ ಎಂದು ಅಖಿಲೇಶ್ ಯಾದವ್ ಇತ್ತೀಚೆಗೆ ಹೇಳಿದ್ದರು. ಆದರೆ ಬಿಎಸ್ಪಿ ಯಾವ ಪಕ್ಷದೊಂದಿಗೂ ಮೈತ್ರಿ ಮಾಡದೆ ಸ್ಪರ್ಧಿಸಲಿದೆ ಎಂದು ಮಾಯಾವತಿ ಹೇಳಿದ್ದಾರೆ.



Join Whatsapp