ಕಾಬೂಲ್ ಆತ್ಮಹತ್ಯಾ ಬಾಂಬ್ ದಾಳಿಯನ್ನು ವಿರೋಧಿಸಿ ಪ್ರತಿಭಟನೆ ನಡೆಸಿದ್ದ 100 ಕ್ಕೂ ಹೆಚ್ಚು ಹಜಾರಾಗಳನ್ನು 7 ಗಂಟೆಗಳ ಕಾಲ ಬಂಧಿಸಿದ ದೆಹಲಿ ಪೊಲೀಸರು

Prasthutha|

ನವದೆಹಲಿ: ಅಫ್ಘಾನಿಸ್ತಾನದ ರಾಜಧಾನಿ ಕಾಬೂಲ್‌ನಲ್ಲಿ ಇತ್ತೀಚೆಗೆ ನಡೆದ ಆತ್ಮಾಹುತಿ ಬಾಂಬ್ ದಾಳಿಯನ್ನು ವಿರೋಧಿಸಿ ಪ್ರತಿಭಟಿಸಲು ಜಂತರ್ ಮಂತರ್‌ನಲ್ಲಿ ಜಮಾಯಿಸಿದ್ದ ಮಧ್ಯ ಅಫ್ಘಾನಿಸ್ತಾನದ ಹಜಾರಾ ಸಮುದಾಯದ ಸುಮಾರು 100 ಜನರನ್ನು ಅಕ್ಟೋಬರ್ 6 ಗುರುವಾರದಂದು ದೆಹಲಿಯಲ್ಲಿ ಪೊಲೀಸರು ಸುಮಾರು ಏಳು ಗಂಟೆಗಳ ಕಾಲ ಬಂಧನದಲ್ಲಿರಿಸಿದ್ದರೆಂದು  ವರದಿಯಾಗಿದೆ.

- Advertisement -

ಗುರುವಾರ, ದೆಹಲಿಯಲ್ಲಿ ನೆಲೆಸಿರುವ ಸುಮಾರು 100 ಹಜಾರಾಗಳು ಕಾಜ್ ಬಾಂಬ್ ಸ್ಫೋಟ ಮತ್ತು ಅಫ್ಘಾನಿಸ್ತಾನದಲ್ಲಿ ಹಜಾರಾ ಸಮುದಾಯವನ್ನು ಗುರಿಯಾಗಿಸಿ ದಾಳಿ ನಡೆಸುವುದನ್ನು ಖಂಡಿಸಿ ಜಂತರ್ ಮಂತರ್‌ ನಲ್ಲಿ ಪ್ರತಿಭಟನೆ ನಡೆಸಲು ನಿರ್ಧರಿಸಿದ್ದರು.  ದೆಹಲಿ ಪೊಲೀಸರು ಸಮಾವೇಶಕ್ಕೆ ಅನುಮತಿ ನೀಡಿದ್ದರು ಎಂದು ವರದಿಯಾಗಿದ್ದರೂ, ಈ ಅನುಮತಿಯನ್ನು ಗುರುವಾರ ಮುಂಜಾನೆ ರದ್ದುಗೊಳಿಸಲಾಗಿದೆ ಎಂದು ಆರೋಪಿಸಲಾಗಿದೆ.

ಅನುಮತಿ ರದ್ದುಗೊಳಿಸಲಾಗಿದೆ ಎಂದು ಜನಸಮೂಹಕ್ಕೆ ತಿಳಿಸಿದ ನಂತರ, ಸದಸ್ಯರು ತಮ್ಮ ಬಸ್ ಗಳಿಗೆ ತೆರಳುತ್ತಿದ್ದಾಗ, ದೆಹಲಿ ಪೊಲೀಸರು ಯಾವುದೇ ವಿವರಣೆಯಿಲ್ಲದೆ ಅವರನ್ನು ವಶಕ್ಕೆ ತೆಗೆದುಕೊಂಡಿದ್ದಾರೆ  ಎಂದು ಈ ಸಭೆಯ ಸದಸ್ಯ ವಿದ್ವಾಂಸ ಮತ್ತು ಸಾಮಾಜಿಕ ಕಾರ್ಯಕರ್ತ ರೆಜಾ ಎಹ್ಸಾನ್ ಟ್ವಿಟರ್ ಲ್ಲಿ ಪೋಸ್ಟ್ ಮಾಡಿದ್ದಾರೆ.

- Advertisement -

ಸೆಪ್ಟೆಂಬರ್ 30 ರಂದು, ಕಾಬೂಲ್‌ನ ಹಜಾರಾ ಪ್ರಾಬಲ್ಯದ ಸಮುದಾಯವಾದ ದಸ್ತೆ ಬರ್ಚಿಯಲ್ಲಿರುವ ಕಾಜ್  ಶಿಕ್ಷಣ ಸಂಸ್ಥೆಯಲ್ಲಿ ನಡೆದ ಆತ್ಮಹತ್ಯಾ ದಾಳಿಯು ಜಗತ್ತನ್ನು ಬೆಚ್ಚಿಬೀಳಿಸಿತ್ತು.  ಅಂದು ಪ್ರವೇಶ ಪರೀಕ್ಷೆಯನ್ನು ಬರೆಯಲು ಹಲವಾರು ವಿದ್ಯಾರ್ಥಿಗಳು ಇನ್‌ ಸ್ಟಿಟ್ಯೂಟ್‌ ನಲ್ಲಿ ಹಾಜರಾಗಿದ್ದರು.  ಪ್ರಾಥಮಿಕ ವರದಿಯು ಸಾವಿನ  ಸಂಖ್ಯೆ 19 ಮತ್ತು ಗಾಯಗೊಂಡವರ ಸಂಖ್ಯೆ 27 ಎಂದು ಹೇಳಿದ್ದರೆ, ನಂತರದ  ಬಿಬಿಸಿಯ ವರದಿಯು ಸಾವಿನ ಸಂಖ್ಯೆಯನ್ನು 53 ಎಂದು ಹೇಳಿವೆ.

Join Whatsapp