ಉತ್ತರ ಪ್ರದೇಶ | ಸ್ಪರ್ಧಿಸಿದ 399 ಕ್ಷೇತ್ರಗಳ ಪೈಕಿ 387ರಲ್ಲಿ ಠೇವಣಿ ಕಳೆದುಕೊಂಡ ಕಾಂಗ್ರೆಸ್ !

Prasthutha|

ಉತ್ತರ ಪ್ರದೇಶ: ಉತ್ತರಪ್ರದೇಶ ವಿಧಾನಸಭಾ ಚುನಾವಣೆಯಲ್ಲಿ ಕೇವಲ ಎರಡು ಕ್ಷೇತ್ರಗಳಲ್ಲಿ ಗೆದ್ದಿರುವ ಕಾಂಗ್ರೆಸ್, ಸ್ಪರ್ಧಿಸಿದ 399 ಕ್ಷೇತ್ರಗಳ ಪೈಕಿ ಬರೋಬ್ಬರಿ 387 ಕ್ಷೇತ್ರಗಳಲ್ಲಿ ಠೇವಣಿ ಕಳೆದುಕೊಂಡಿದೆ. ಎಲ್ಲಾ 403 ಸ್ಥಾನಗಳಿಗೆ ಸ್ಪರ್ಧಿಸಿದ್ದ ಬಿಎಸ್‌ಪಿ 290 ರಲ್ಲಿ ಠೇವಣಿ ಕಳೆದುಕೊಂಡರೆ. 347 ಸ್ಥಾನಗಳಲ್ಲಿ ಸ್ಪರ್ಧಿಸಿದ್ದ ಎಸ್ ಪಿ 6ರಲ್ಲಿ ಠೇವಣಿ ಕಳೆದುಕೊಂಡಿದೆ. ಸರಕಾರ ರಚಿಸಲಿರುವ ಬಿಜೆಪಿ 376 ಸ್ಥಾನಗಳಲ್ಲಿ ಸ್ಪರ್ಧಿಸಿ 3ರಲ್ಲಿ ಠೇವಣಿ ಕಳೆದುಕೊಂಡಿದೆ.

- Advertisement -

ಉತ್ತರ ಪ್ರದೇಶದಲ್ಲಿ ನಡೆದ ವಿಧಾನಸಭಾ ಚುನಾವಣೆಯಲ್ಲಿ ಒಟ್ಟಾರೆಯಾಗಿ 4,442 ಅಭ್ಯರ್ಥಿಗಳು ಕಣಕ್ಕಿಳಿದಿದ್ದರು. ಈ ಪೈಕಿ 3,552 ಮಂದಿ ಠೇವಣಿ ಕಳೆದುಕೊಂಡಿದ್ದಾರೆ. ಒಂದು ಕ್ಷೇತ್ರದಲ್ಲಿ ಚಲಾವಣೆಯಾದ ಒಟ್ಟು ಮಾನ್ಯವಾದ ಮತಗಳ ಆರನೇ ಒಂದು ಭಾಗವನ್ನು ಪಡೆಯಲು ವಿಫಲವಾದಾಗ ಅಭ್ಯರ್ಥಿಯು ಠೇವಣಿ ಕಳೆದುಕೊಳ್ಳುತ್ತಾನೆ ಎಂದು ನಿಯಮಗಳು ಹೇಳುತ್ತವೆ.

ಕಳೆದ ಚುನಾವಣೆಯಲ್ಲಿ ಐದು ಸ್ಥಾನಗಳನ್ನು ಗೆದ್ದು ಬೀಗಿದ್ದ ಕಾಂಗ್ರೆಸ್ ಈ ಬಾರಿ ಕೇವಲ ಎರಡು ಸ್ಥಾನ ಪಡೆಯಲು ಶಕ್ತವಾಗಿದೆ.

Join Whatsapp