ನವದೆಹಲಿ: ದೆಹಲಿಯ ರೋಹಿಣಿ ನ್ಯಾಯಾಲಯದಲ್ಲಿ ಇಂದು ಬೆಳಿಗ್ಗೆ ಸುಮಾರು 10:40 ಕ್ಕೆ ಸ್ಫೋಟ ಸಂಭವಿಸಿದೆ ಎಂದು ವರದಿಯಾಗಿದೆ. ಚೇಂಬರ್ ಸಂಖ್ಯೆ102 ರ ಒಳಗಡೆ ಈ ಘಟನೆ ಸಂಭವಿಸಿದ್ದು, ಒಬ್ಬ ವ್ಯಕ್ತಿ ಗಾಯಗೊಂಡಿದ್ದಾನೆ. ಘಟನೆಯ ನಂತರ ನ್ಯಾಯಾಲಯದ ವಿಚಾರಣೆಯನ್ನು ನಿಲ್ಲಿಸಲಾಯಿತು.
ಸ್ಫೋಟದ ನಿಜವಾದ ಕಾರಣ ಇನ್ನೂ ಪತ್ತೆಯಾಗಿಲ್ಲವಾದರೂ, ಆರಂಭಿಕ ವರದಿಗಳು ಇದನ್ನು ಲ್ಯಾಪ್ ಟಾಪ್ ಅಥವಾ ಟಿಫಿನ್ ಬಾಕ್ಸ್ ಸ್ಫೋಟ ಎಂದು ಹೇಳಿಕೊಂಡಿವೆ. ಪೊಲೀಸರು ಇನ್ನೂ ಈ ಬಗ್ಗೆ ತನಿಖೆ ನಡೆಸುತ್ತಿದ್ದಾರೆ ಮತ್ತು ಹೆಚ್ಚಿನ ವಿವರಗಳನ್ನು ನಿರೀಕ್ಷಿಸಲಾಗುತ್ತಿದೆ.
ಈ ವರ್ಷದ ಸೆಪ್ಟೆಂಬರ್ ನಲ್ಲಿ ರೋಹಿಣಿ ನ್ಯಾಯಾಲಯದ ಒಳಗೆ ಶೂಟೌಟ್ ನಡೆದಿತ್ತು, ಅದರಲ್ಲಿ ದರೋಡೆಕೋರ ಜಿತೇಂದರ್ ಗೋಗಿ ಸೇರಿದಂತೆ ಮೂವರು ಸಾವನ್ನಪ್ಪಿದ್ದರು.