ಭೀಮಾ ಕೋರೆಗಾಂವ್ ಪ್ರಕರಣ: ಸಾಮಾಜಿಕ ಕಾರ್ಯಕರ್ತೆ ಸುಧಾ ಭಾರದ್ವಾಜ್ 3 ವರ್ಷಗಳ ಜೈಲುವಾಸದ ಬಳಿಕ ಬಿಡುಗಡೆ

Prasthutha|

ನವದೆಹಲಿ: ಭೀಮಾ ಕೋರೆಗಾಂವ್ ಹಿಂಸಾಚಾರ ಪ್ರಕರಣಕ್ಕೆ ಸಂಬಂಧಿಸಿದಂತೆ ಕಳೆದ ಮೂರು ವರ್ಷಗಳಿಂದ ಜೈಲಿನಲ್ಲಿರುವ ಸಾಮಾಜಿಕ ಕಾರ್ಯಕರ್ತೆ, ವಕೀಲೆ ಸುಧಾ ಭಾರದ್ವಾಜ್, ಗುರುವಾರ ಜಾಮೀನಿನ ಮೇಲೆ ಬಿಡುಗಡೆಯಾಗಿದ್ದಾರೆ.

- Advertisement -

ಭೀಮಾ ಕೋರೆಗಾಂವ್ ಹಿಂಸಾಚಾರ ಪ್ರಕರಣಕ್ಕೆ ಸಂಬಂಧಿಸಿದಂತೆ 2018 ರ ಆಗಸ್ಟ್ ನಲ್ಲಿ UAPA ಸೆಕ್ಷನ್ ಅಡಿಯಲ್ಲಿ ಬಂಧಿತ ಭಾರದ್ವಾಜ್ ಅವರಿಗೆ ಈ ಹಿಂದೆ ಬಾಂಬೆ ಹೈಕೋರ್ಟ್ ಡೀಪಾಲ್ಟ್ ಜಾಮೀನು ನೀಡಿತ್ತು.

ಎನ್.ಐ.ಎ ವಿಶೇಷ ನ್ಯಾಯಾಲಯ ಬುಧವಾರ ಭಾರದ್ವಾಜ್ ಅವರಿಗೆ ಐವತ್ತು ಸಾವಿರ ಶ್ಯೂರಿಟಿ ಆಧಾರದಲ್ಲಿ ಜಾಮೀನು ನೀಡಿತ್ತು.
ಪ್ರಸಕ್ತ 2017 ರ ಡಿಸೆಂಬರ್ 31 ರಂದು ಪುಣೆಯಲ್ಲಿ ನಡೆದ ಎಲ್ಗರ್ ಷರಿಷತ್ ಸಮಾವೇಶದಲ್ಲಿ ಪ್ರಚೋದನಾಕಾರಿ ಭಾಷಣದಿಂದಾಗಿ 2018 ರ ಜನವರಿ 1 ರಂದು ಭೀಮಾ ಯುದ್ಧ ಸ್ಮಾರಕದ ಬಳಿ ಬೃಹತ್ ಮಟ್ಟದ ಹಿಂಸಾಚಾರ ನಡೆದಿತ್ತು. ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಪೊಲೀಸರು ಭಾರದ್ವಾಜ್ ಸೇರಿದಂತೆ ಪ್ರಮುಖ 16 ಮಂದಿಯ ವಿರುದ್ಧ ಪ್ರಕರಣ ದಾಖಲಿಸಿದ್ದರು.

- Advertisement -

ಸದ್ಯ ಬಂಧಿತ 16 ಮಂದಿಯ ಪೈಕಿ ಭಾರದ್ವಾಜ್ ಅವರಿಗೆ ಡೀಪಾಲ್ಟ್ ಜಾಮೀನು ಲಭಿಸಿದಂತಾಗಿದೆ.

Join Whatsapp