“ಪ್ರತಿಪಕ್ಷಗಳು ಬಾಯಿ ಕಟ್ಟಿಕೊಂಡಾಗ, ಆಡಳಿತ ಪಕ್ಷದ ನಾಯಕರು ಟೀಕಿಸಬೇಕಾಗುತ್ತದೆ”: ಸುಬ್ರಹ್ಮಣ್ಯ ಸ್ವಾಮಿ

Prasthutha|

ದೆಹಲಿ: ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರ್ಕಾರದ ಆರ್ಥಿಕ ನೀತಿಗಳನ್ನು ಸದಾ ಟೀಕಿಸುತ್ತಿರುವ ಬಿಜೆಪಿ ರಾಜ್ಯಸಭಾ ಸದಸ್ಯ ಸುಬ್ರಮಣಿಯನ್‌ ಸ್ವಾಮಿ ಅವರು ಮಾಡಿದ ಟ್ವೀಟ್ ವೊಂದು ಇದೀಗ ಗಮನ ಸೆಳೆಯುತ್ತಿದೆ.

- Advertisement -

ಬುಧವಾರ ಅವರು ಮಾಡಿದ ಟ್ವೀಟ್ ನಲ್ಲಿ ಪ್ರತಿಪಕ್ಷದ ವೈಫಲ್ಯವನ್ನೂ ಎತ್ತಿ ಹಿಡಿದಿದ್ದಾರೆ. ಅಲ್ಲದೇ, ತಮ್ಮದೇ ಪಕ್ಷದ ಆಡಳಿತದ ಬಗ್ಗೆ ಟೀಕಿಸುವ ವಿಚಾರಕ್ಕೆ ಬ್ರಿಟನ್ ಮಾಜಿ ಪ್ರಧಾನಿ ವಿನ್‌ಸ್ಟನ್‌ ಚರ್ಚಿಲ್‌ ಅವರ ಹೇಳಿಕೆಯನ್ನು ಉದಾಹರಣೆಯಾಗಿ ನೀಡಿದ್ದಾರೆ.

‘1930ರಲ್ಲಿ ಚರ್ಚಿಲ್‌ ಹೇಳಿದಂತೆ, ಪ್ರತಿಪಕ್ಷಗಳು ನಾಲಿಗೆ ಕಟ್ಟಿಕೊಂಡಾಗ, ತನ್ನಂತಹ ಗುರುತಿಸಲ್ಪಟ್ಟ ಆಡಳಿತ ಪಕ್ಷದ ನಾಯಕರು ಸರ್ಕಾರದ ತಪ್ಪು ನೀತಿಗಳನ್ನು ಟೀಕಿಸಬೇಕಾಗುತ್ತದೆ’ ಎಂದು ಸುಬ್ರಮಣಿಯನ್‌ ಸ್ವಾಮಿ ಟ್ವೀಟ್‌ ಮೂಲಕ ತನ್ನ ಟೀಕಿಸುವ ಹಕ್ಕನ್ನು ಸಮರ್ಥಿಸಿಕೊಂಡಿದ್ದಾರೆ.



Join Whatsapp