ಉದ್ಯೋಗದಾತರ ಸಮ್ಮತಿಯಿಲ್ಲದೆ ಯುಎಇಯಲ್ಲಿ ಅರೆಕಾಲಿಕ ಕೆಲಸ ಮಾಡಲು ಅವಕಾಶ: ವಲಸಿಗರಿಗೆ ಶುಭ ಸುದ್ಧಿ

Prasthutha|

ದುಬೈ: ಖಾಸಗಿ ವಲಯದಲ್ಲಿ ಉದ್ಯೋಗದಾತರ ಸಮ್ಮತಿಯಿಲ್ಲದೆ ಪ್ರಮುಖ ಕೆಲಸದ ಜೊತೆಗೆ ಅರೆಕಾಲಿಕ ಕೆಲಸ ಮಾಡಲು ಅವಕಾಶ ನೀಡುವ ಕಾನೂನು ಮುಂದಿನ ತಿಂಗಳ 2 ರಿಂದ ಯುಎಇಯಲ್ಲಿ ಜಾರಿಗೆ ಬರಲಿದೆ.

- Advertisement -

ಮಾನವ ಸಂಪನ್ಮೂಲ ಅಭಿವೃದ್ಧಿ ಸಚಿವಾಲಯದ ತಾತ್ಕಾಲಿಕ ಅನುಮೋದನೆಯೊಂದಿಗೆ ಈ ರೀತಿ ಕೆಲಸ ಮಾಡಬಹುದು. ಕೆಲವು ಗಂಟೆಗಳ ಕಾಲ ಅಥವಾ ದಿನಗಳ ಕಾಲ ಕೆಲಸ ಮಾಡುವ ಸ್ಥಳದಲ್ಲಿ ಅಥವಾ ಮನೆಯಲ್ಲಿ ಕೆಲಸ ಮಾಡಬಹುದು ಎಂಬ ವ್ಯವಸ್ಥೆಯು ವಲಸಿಗರಿಗೆ ತುಂಬಾ ಪ್ರಯೋಜನಕಾರಿಯಾಗಿದೆ.

ಕಾನೂನನ್ನು ದುರುಪಯೋಗಪಡಿಸಿಕೊಳ್ಳದಿರಲು ಈ ರೀತಿಯಲ್ಲಿ ಕೆಲಸ ಮಾಡುವ ಸಮಯವನ್ನು ಮೂರು ವಾರಗಳಲ್ಲಿ ಗರಿಷ್ಠ 144 ಗಂಟೆಗಳು ಎಂದು ನಿಗದಿಪಡಿಸಲಾಗಿದೆ. ಅಲ್ಪಾವಧಿಯ ಗುತ್ತಿಗೆ ಕೆಲಸವನ್ನೂ ಈ ರೀತಿ ಮಾಡಬಹುದು. ಕೆಲಸ ಮುಗಿಯುವುದರೊಂದಿಗೆ ಒಪ್ಪಂದವೂ ರದ್ದಾಗುತ್ತದೆ. ಉದ್ಯೋಗಿಗೆ ವಿಭಿನ್ನ ಕೆಲಸದ ಸಮಯವನ್ನು ಆಯ್ಕೆ ಮಾಡಲು ಅವಕಾಶವಿದೆ. ವಾರ್ಷಿಕ ರಜೆ, ಸೇವಾ ಅವಧಿ ಮತ್ತು ಕೆಲಸ ಮುಗಿಯುವ ವೇಳೆಯಲ್ಲಿ ಸಿಗುವ  ಪ್ರಯೋಜನಗಳಿಗೂ ಸಹ ಅರ್ಹರಾಗಿರುತ್ತಾರೆ.

Join Whatsapp