ಗೋರಖ್ ಪುರ್ ಹೋಟೆಲ್ ಗೆ ಪೊಲೀಸ್ ದಾಳಿ ವೇಳೆ ಓರ್ವ ಸಾವು । ಘಟನಾ ಸಂಬಂಧ 6 ಪೊಲೀಸರ ಅಮಾನತು

Prasthutha|

ಲಕ್ನೋ: ಕಳೆದ ತಡರಾತ್ರಿ ಗೋರಖ್ ಪುರ ಹೋಟೆಲ್ ಗೆ ಪೊಲೀಸರು ಅಪರಾಧಿಗಳನ್ನು ಹುಡುಕುವ ನೆಪದಲ್ಲಿ ದಾಳಿ ನಡೆಸಿದ ವೇಳೆ ಕಾನ್ಪುರದ ರಿಯಲ್ ಎಸ್ಟೇಟ್ ಉದ್ಯಮಿಯೋರ್ವರು ಸಾವನ್ನಪ್ಪಿದ್ದಾರೆ. ಘಟನೆಗೆ ಸಂಬಂಧಿಸಿದಂತೆ 6 ಮಂದಿ ಪೊಲೀಸರನ್ನು ಅಮಾನತುಗೊಳಿಸಲಾಗಿದೆ.

- Advertisement -

ಮಂಗಳವಾರ ತಡರಾತ್ರಿ ಗೋರಖ್ ಪುರದ ಹೋಟೆಲೊಂದರ ಕೋಣೆಗೆ ನುಗ್ಗಿ ಅಪರಾಧಿಗಳನ್ನು ಹುಡುಕುತ್ತಿದ್ದ ವೇಳೆ ನಡೆದ ಹಲ್ಲೆಯಿಂದಾಗಿ ಆತ ಮೃತಪಟ್ಟಿದ್ದಾನೆ. ಘಟನೆಗೆ ಸಂಬಂಧಿಸಿದಂತೆ ರಾಮಘಡಲ್ ಪೊಲೀಸ್ ಠಾಣೆಯ ಅಧಿಕಾರಿ ಸೇರಿದಂತೆ 6 ಪೊಲೀಸರನ್ನು ಅಮಾನತುಗೊಳಿಸಲಾಗಿದೆ.

ಹೋಟೆಲ್ ಕೋಣೆಯಲ್ಲಿ ತನ್ನ ಪತಿಯೊಂದಿಗೆ ಗೋರಖ್ ಪುರ ಪೊಲೀಸರು ಅಸಭ್ಯವಾಗಿ ವರ್ತಿಸಿ ಗಂಭೀರವಾಗಿ ಹಲ್ಲೆ ನಡೆಸಿ ಕೊಂದಿದ್ದಾರೆ ಎಂದು ಸಂತ್ರಸ್ತನ ಪತ್ನಿ ಪೊಲೀಸ್ ವರಿಷ್ಠಾಧಿಕಾರಿಗೆ ದೂರು ಸಲ್ಲಿಸಿದ್ದಾರೆ. ಈ ಆರೋಪವನ್ನು ನಿರಾಕರಿಸಿರುವ ಪೊಲೀಸರು ಗುಪ್ತ ಕೋಣೆಯಲ್ಲಿ ಬಿದ್ದು ಸಾವನ್ನಪ್ಪಿದ್ದಾನೆ ಎಂದು ತಿಳಿಸಿದ್ದಾರೆ.

Join Whatsapp