ಗುಜರಾತಿನಲ್ಲಿ ನಿರ್ಮಾಣ ಹಂತದ ಸೇತುವೆ ಕುಸಿದು ಓರ್ವ ಮೃತ್ಯು

Prasthutha|

ಅಹಮದಾಬಾದ್: ಉಳ್ಳವರ ಭ್ರಷ್ಟಾಚಾರದ ಪರಿಣಾಮದ ಕಳಪೆ ಕಾಮಗಾರಿಗೆ ಗುಜರಾತಿನಲ್ಲಿ ಓರ್ವ ಬಲಿಯಾಗಿದ್ದಾರೆ. ನಿರ್ಮಾಣ ಹಂತದ ಮೇಲ್ಸೇತುವೆಯೊಂದು ಕುಸಿದು ಬಿದ್ದು ಓರ್ವ ವ್ಯಕ್ತಿ ದಾರುಣವಾಗಿ ಮೃತಪಟ್ಟ ಘಟನೆ ಗುಜರಾತಿನ ಭನಸ್​ಕಾಂತ ಜಿಲ್ಲೆ ಪಲನ್​ಪುರದಲ್ಲಿ ನಡೆದಿದೆ.

- Advertisement -

ಕಳೆದ ಕೆಲ ತಿಂಗಳುಗಳಿಂದ ಸೇತುವೆ ನಿರ್ಮಾಣ ಹಂತದಲ್ಲಿತ್ತು. ಪಲನ್​ಪುರದಿಂದ ಅಂಬಾಜಿಗೆ ಸೇತುವೆ ಸಂಪರ್ಕ ಕಲ್ಪಿಸುತ್ತಿತ್ತು.

ಬ್ರಿಡ್ಜ್​ ಕುಸಿತದ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್​ ಆಗಿದೆ. ಕಳಪೆ ಕಾಮಗಾರಿ ಸೇತುವೆ ಕುಸಿತಕ್ಕೆ ಪ್ರಮುಖ ಕಾರಣ ಎಂದು ಹೇಳಲಾಗಿದೆ. ವಿಚಾರ ತಿಳಿದು ಸ್ಥಳಕ್ಕೆ ದೌಡಾಯಿಸಿ ರಕ್ಷಣಾ ಇಲಾಖೆಯ ಅಧಿಕಾರಿಗಳು ಕಾರ್ಯಾಚರಣೆಯನ್ನು ಪ್ರಾರಂಭಿಸಿದ್ದಾರೆ. ಸೇತುವೆ ಅಡಿ ಹಲವರು ಸಿಲುಕಿರುವ ಶಂಕೆ ವ್ಯಕ್ತವಾಗಿದ್ದು, ರಕ್ಷಣಾ ಕಾರ್ಯಾಚರಣೆ ಭರದಿಂದ ಸಾಗಿದೆ. ದುರ್ಘಟನೆಯಲ್ಲಿ ಓರ್ವ ವ್ಯಕ್ತಿ ಮೃತಪಟ್ಟಿದ್ದಾರೆ  ಎಂದು ಹಿರಿಯ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

Join Whatsapp