ಮಹಿಳಾ ದಿನಾಚರಣೆ ಅಂಗವಾಗಿ ಬ್ರೈನ್ ಸೆಂಟರ್ ಸಂಶೋಧನಾ ಕೇಂದ್ರದಿಂದ ಮಾ. 12 ರಂದು ಶಿಕ್ಷಕಿಯರಿಗೆ ತರಬೇತಿ ಆಯೋಜನೆ

Prasthutha|

ಬೆಂಗಳೂರು: ಅಂತಾರಾಷ್ಟ್ರೀಯ ಮಹಿಳಾ ದಿನಾಚರಣೆ ಅಂಗವಾಗಿ ಬ್ರೈನ್ ಸೆಂಟರ್ ಸಂಶೋಧನಾ ಕೇಂದ್ರದಿಂದ ರಾಷ್ಟ್ರ ನಿರ್ಮಾಣದಲ್ಲಿ ತೊಡಗಿರುವ ಶಿಕ್ಷಕಿಯರಿಗೆ ಇದೇ 12 ರ ಭಾನುವಾರ ತರಬೇತಿ ಕಾರ್ಯಾಗಾರ ಆಯೋಜಿಸಲಾಗಿದೆ. ಕಾರ್ಯಾಗಾರದಲ್ಲಿ ಶಿಕ್ಷಕರು ಸಹ ಪಾಲ್ಗೊಳ್ಳಬಹುದು ಎಂದು ಬೈನ್ ಸೆಂಟರ್ ಸಂಶೋಧನಾ ಕೇಂದ್ರದ ನಿರ್ದೇಶಕ, ಕ್ಯಾಮ್ಸ್ ಪ್ರಧಾನ ಕಾರ್ಯದರ್ಶಿ ಡಿ.ಶಶಿಕುಮಾರ್ ತಿಳಿಸಿದ್ದಾರೆ.
ಶಿಕ್ಷಕರಲ್ಲಿ ಮಹಿಳಾ ಸಂವೇದನೆ ಬಗ್ಗೆ ಇನ್ನಷ್ಟು ಅರಿವು ಮೂಡಿಸುವ ಜೊತೆಗೆ ಅವರಲ್ಲಿ ಚೈತನ್ಯ ತುಂಬಿ ಉತ್ತಮ ವಿದ್ಯಾರ್ಥಿಗಳನ್ನು ರೂಪಿಸುವುದು ಈ ಕಾರ್ಯಾಗಾರದ ಉದ್ದೇಶವಾಗಿದೆ.
ಗಿನ್ನೆಸ್ ವಿಶ್ವದಾಖಲೆ ಹೊಂದಿರುವ ಗ್ರೀನ್ಸ್ ಇನ್ನೊವೇಟರ್ ಸಂಸ್ಥೆ, ಕ್ಯಾಮ್ಸ್ ದಕ್ಷಿಣ ವಲಯ -1 ಮತ್ತು 2 ಹಾಗೂ ಬ್ರಾಹ್ಮ ಮಹಿಳಾ ಸಂಘಗಳ ಸಹಯೋಗದೊಂದಿಗೆ ಶಿಕ್ಷಣ ತಜ್ಞ ಹಾಗೂ ಬೈನ್ ಸೆಂಟರ್ ಸಂಶೋಧನಾ ಕೇಂದ್ರದ ಗಿರಿನಗರದ ಆವಲಹಳ್ಳಿಯ ರಾಷ್ಟ್ರಕವಿ ಕುವೆಂಪು ಕಲಾಮಂದಿರದಲ್ಲಿ ಕಾರ್ಯಾಗಾರ ಏರ್ಪಡಿಸಲಾಗಿದೆ. ಈ ಸಂದರ್ಭದಲ್ಲಿ ಶ್ರೀನಗರದ ಕುಸುಮ ಆಸ್ಪತ್ರೆ, ಉಚಿತ ವೈದ್ಯಕೀಯ ತಪಾಸಣೆ ಶಿಬಿರ ಆಯೋಜಿಸಲಾಗಿದೆ. ಗಿನ್ನೆಸ್ ವಿಶ್ವದಾಖಲೆ ಹೊಂದಿರುವ ರಂಗಲಕ್ಷ್ಮಿ ಶ್ರೀನಿವಾಸ್ ಅವವರಿಂದ ನಗೆಯೋಗ ಕಾರ್ಯಕ್ರಮ ನಡೆಯಲಿದೆ.
ಆಸಕ್ತ ಶಾಲೆಗಳು, ಶಿಕ್ಷಕರು 9448679023 ಅಥವಾ 9663314973 ಸಂಖ್ಯೆಯ ಮೂಲಕ ನೋಂದಣಿ ಮಾಡಿಕೊಳ್ಳಬೇಕೆಂದು ವಾಟ್ಸಾಪ್ ಮಾಡಬೇಕೆಂದು ಪ್ರಕಟಣೆ ತಿಳಿಸಿದೆ.

Join Whatsapp