ಪುತ್ರಿಯರ ದಿನದ ಪ್ರಯುಕ್ತ ವಂಡರ್‌ ಲಾ ವತಿಯಿಂದ ಹೆಣ್ಣು ಮಕ್ಕಳಿಗೆ ಉಚಿತ ಟಿಕೆಟ್‌ !

Prasthutha|

ಬೆಂಗಳೂರು: ಪುತ್ರಿಯರ ದಿನಾಚರಣೆ ಪ್ರಯುಕ್ತ ವಂಡರ್‌ ಲಾ ಸೆ. 25ರಂದು ಹೆಣ್ಣು ಮಕ್ಕಳಿಗೆ ಉಚಿತ ಟಿಕೆಟ್‌ ನೀಡುವುದಾಗಿ ಘೋಷಿಸಿದೆ.

ಇದೇ ಸೆಪ್ಟೆಂಬರ್‌ 25ರಂದು ಪುತ್ರಿಯರ ದಿನಾಚರಣೆ ಇರಲಿದ್ದು, ಈ ದಿನ ಹೆಣ್ಣುಮಕ್ಕಳಿಗೆ ಉಚಿತ ಟಿಕೆಟ್‌ ನೀಡಲಾಗುವುದು. ಈ ಕೊಡುಗೆಯ ಅನುಕೂಲ ಪಡೆಯಬೇಕಾದಲ್ಲಿ ಪ್ರತಿಯೊಬ್ಬ ಹೆಣ್ಣುಮಕ್ಕಳು ತಮ್ಮ ಪೋಷಕರೊಂದಿಗೆ ಆನ್‌ ಲೈನ್‌ ಮೂಲಕ ಬುಕ್ಕಿಂಗ್‌ ಮಾಡಿಕೊಳ್ಳಬೇಕು.

- Advertisement -

ಮೊದಲ ಸಾವಿರ ಬುಕ್ಕಿಂಗ್‌ ಗೆ ಈ ಕೊಡುಗೆ ಅನ್ವಯವಾಗಲಿದೆ. ಆನ್‌ ಲೈನ್‌ ನಲ್ಲಿ ಬುಕ್ಕಿಂಗ್‌ ಮಾಡುವ ವೇಳೆ, ‘DGHTRSDAY’ ಎಂಬ ಕೋಡ್‌ನಲ್ಲಿ ನಮೂದಿಸಿ ಬುಕ್ಕಿಂಗ್‌ ಮಾಡುವುದರಿಂದ ಈ ಕೊಡುಗೆ ಪಡೆಯಬಹುದು. ಒಂದು ಕುಟುಂಬದಲ್ಲಿ ಪೋಷಕರೊಂದಿಗೆ ತೆರಳುವ ಒಬ್ಬ ಮಗಳಿಗೆ ಮಾತ್ರ ಈ ಕೊಡುಗೆ ಅನ್ವಯವಾಗಲಿದೆ. ಬುಕ್ಕಿಂಗ್‌ ಬಳಿಕ, ಸೆ,25ರಂದು ಪಾರ್ಕ್‌ಗೆ ತೆರಳುವ ವೇಳೆ ಗುರುತಿನ ಚೀಟಿ ಕೊಂಡೊಯ್ಯುವುದು ಕಡ್ಡಾಯ. ಬುಕ್ಕಿಂಗ್‌ಗಾಗಿ https://www.wonderla.com/ ವೆಬ್‌ ಸೈಟ್‌ ಗೆ ಭೇಟಿ ನೀಡಿ. ಹೆಚ್ಚಿನ ವಿವರಗಳಿಗೆ 080 37230333, 080 35073966 ಸಂಪರ್ಕಿಸಬಹುದು ಎಂದು ಪ್ರಕಟಣೆ ತಿಳಿಸಿದೆ.

- Advertisement -