ಬಾಬರಿ ಧ್ವಂಸಕ್ಕೆ 30 ವರ್ಷ: ಅಯೋಧ್ಯೆಯಲ್ಲಿ ಕಟ್ಟೆಚ್ಚರ

Prasthutha|

ಅಯೋಧ್ಯೆ: ಬಾಬರಿ ಮಸ್ಜಿದ್ ಧ್ವಂಸಗೊಂಡು 30 ವರ್ಷವಾದ ಹಿನ್ನೆಲೆಯಲ್ಲಿ ಅಯೋಧ್ಯೆಯಲ್ಲಿ ಭದ್ರತಾ ಪಡೆಗಳು ಕಟ್ಟೆಚ್ಚರ ವಹಿಸಿದೆ. ಡಿಸೆಂಬರ್ 6 ರಂದು ಯಾವುದೇ ಅಹಿತಕರ ಘಟನೆ ನಡೆಯದಂತೆ ಎಚ್ಚರ ವಹಿಸುವಂತಾಗಲು ಜಿಲ್ಲಾಡಳಿತ ವಿಶೇಷ ಕಂಟ್ರೋಲ್ ರೂಮ್ ಅನ್ನು ಸ್ಥಾಪಿಸಿದೆ.

- Advertisement -

ಅಯೋಧ್ಯೆ ದೇವಾಲಯದ ಪಟ್ಟಣ ಮತ್ತು ಜಿಲ್ಲೆಯನ್ನು ಭದ್ರತಾ ಪಡೆಗಳ ವಲಯಗಳನ್ನಾಗಿ ವಿಂಗಡಿಸಲಾಗಿದೆ ಮತ್ತು ಸೂಕ್ಷ್ಮ ಸ್ಥಳಗಳಿಗೆ ಸೇನೆಯನ್ನು ನಿಯೋಜಿಸಲಾಗಿದೆ. ಅಯೋಧ್ಯೆ ಮತ್ತು ಫೈಝಾಬಾದ್ ಗಳಲ್ಲಿನ ಎಲ್ಲಾ ಬೆಳವಣಿಗೆಗಳ ಮೇಲೆ ನಿಗಾ ಇರಿಸುವಂತೆ ಎಲ್ಲಾ ಮ್ಯಾಜಿಸ್ಟ್ರೇಟ್ ಗಳಿಗೆ ಸೂಚನೆ ನೀಡಲಾಗಿದೆ.

ಬಾಬರಿ ಮಸ್ಜಿದ್ ಧ್ವಂಸದ ಪ್ರತಿ ವರ್ಷದ ಡಿಸೆಂಬರ್ 6 ಅನ್ನು ‘ಕಪ್ಪು ದಿನವಾಗಿ ಆಚರಿಸುತ್ತಿದ್ದ ಅಯೋಧ್ಯೆಯ ಮುಸ್ಲಿಂ ಸಮುದಾಯ ಈ ಬಾರಿ ಕಾರ್ಯಕ್ರಮದಿಂದ ಹಿಂದೆ ಸರಿದಿದೆ.

- Advertisement -

ಮುಸ್ಲಿಮ್ ಮುಖಂಡ ಮತ್ತು ಅಯೋಧ್ಯೆ ಕಾರ್ಪೋರೇಟರ್ ಹಾಜಿ ಅಸದ್ ಅಹ್ಮದ್ ಮಾತನಾಡಿ, ಪ್ರಸಕ್ತ ಅಯೋಧ್ಯೆ ತೀರ್ಪಿನ ನಂತರ ವಿವಾದಾತ್ಮಕ ರಾಮ ಮಂದಿರಕ್ಕಾಗಿ ವಕ್ಫ್ ಮಾಡಲ್ಪಟ್ಟ ಬಾಬರಿ ಮಸ್ಜಿದ್ ಭೂಮಿಯನ್ನು ಹಸ್ತಾಂತರಿಸಿದ ನಂತರ ಹಿಂದೂ ಸಮುದಾಯದವರು ಮುಸ್ಲಿಮರೊಂದಿಗೆ ಸೌಹಾರ್ದತೆಯಿಂದ ಜೀವಿಸಲು ಬಯಸಿದೆ. ಈ ನಿಟ್ಟಿನಲ್ಲಿ ನಾವು ಯಾವುದೇ ಕಾರ್ಯಕ್ರಮವನ್ನು ನಡೆಸುವುದಿಲ್ಲ. ಮಾತ್ರವಲ್ಲ ಅಯೋಧ್ಯೆ ಮತ್ತು ಫೈಝಾಬಾದ್ ನ ಎಲ್ಲಾ ಮಸೀದಿಗಳಲ್ಲಿ ಪವಿತ್ರ ಕುರ್ ಆನ್ ಪಠಣವಿರುತ್ತದೆ ಮತ್ತು ಶಾಂತಿ, ಸಹೋದರತ್ವದ ಉಳಿವಿಗಾಗಿ ಪ್ರಾರ್ಥಿಸುತ್ತೇವೆ ಎಂದು ತಿಳಿಸಿದರು.



Join Whatsapp