ಬಾಬರಿ ಮಸೀದಿ ಪುನರ್ ನಿರ್ಮಾಣ ಆಗುವವರೆಗೂ ಹೋರಾಟ ಮುಂದುವರೆಯಲಿದೆ: ಎಸ್.ಡಿ.ಪಿ.ಐ

Prasthutha|

ಹಾಸನ: ಪ್ರಜಾಪ್ರಭುತ್ವ, ಜಾತ್ಯತೀತತೆ, ಸಂವಿಧಾನದ ಆಶಯಗಳನ್ನು ನುಚ್ಚು ನೂರು ಮಾಡಿ ಐತಿಹಾಸಿಕ ಬಾಬರಿ ಮಸೀದಿಯ ದ್ವಂಸ ಭಾರತ ದೇಶಕ್ಕೆ ಕಪ್ಪು ಚುಕ್ಕೆಯಾಗಿದೆ. ಅನ್ಯಾಯವನ್ನು ಸರಿಪಡಿಸುವ ಭರವಸೆಯನ್ನು ಹುಸಿಗೊಳಿಸಿ ನೀಡಿದ ತೀರ್ಪು ನ್ಯಾಯಸಮ್ಮತವಲ್ಲ, ಬಾಬರಿ ಮಸೀದಿ ಪುನರ್ ನಿರ್ಮಾಣ ಆಗು ವವರೆಗೆ ನ್ಯಾಯಕ್ಕಾಗಿರುವ ಹೋರಾಟ ಅನಿವಾರ್ಯ ಎಂದು ಹಾಸನ ನಗರ ಪ್ರಧಾನ ಕಾರ್ಯದರ್ಶಿ ಫರೀದ್ ಹೇಳಿದ್ದಾರೆ.

- Advertisement -


ಐತಿಹಾಸಿಕ ಬಾಬರೀ ಮಸೀದಿಯನ್ನು ಸಂಘಪರಿವಾರದ ಕಾರ್ಯಕರ್ತರು ಧ್ವಂಸಗೊಳಿಸಿ 30 ವರ್ಷವಾದ ಹಿನ್ನೆಲೆಯಲ್ಲಿ ಹಾಸನದಲ್ಲಿಂದು ಮಸೀದಿಯ ಪುನರ್ ನಿರ್ಮಾಣಕ್ಕಾಗಿ ಒತ್ತಾಯಿಸಿ ಎಸ್ ಡಿಪಿಐ ವತಿಯಿಂದ ಏರ್ಪಡಿಸಿದ್ದ ಪ್ರತಿಭಟನೆಯನ್ನು ಉದ್ದೇಶಿಸಿ ಅವರು ಮಾತನಾಡಿದರು.
1045 ಪುಟಗಳ ಸುಪ್ರೀಂ ಕೋರ್ಟಿನ ತೀರ್ಪಿನಲ್ಲಿ ಬಾಬರಿ ಮಸೀದಿಯನ್ನು ಯಾವುದೇ ಮಂದಿರ ಒಡೆದು ನಿರ್ಮಿಸಲಾಗಿಲ್ಲ, ಪುರಾತತ್ವ ಇಲಾಖೆ ಯಾವುದೇ ಮಂದಿರದ ಅವಶೇಷಗಳನ್ನು ಗುರುತಿಸಲಿಲ್ಲ, 1949ರ ವರೆಗೆ ಅಲ್ಲಿ ನಮಾಝ್ ನಡೆಸಲಾಗುತ್ತಿತ್ತು ಎಂಬುದನ್ನು ಸ್ಪಷ್ಟಪಡಿಸಿದೆ. ಮಾತ್ರವಲ್ಲ 1949 ಡಿಸೆಂಬರ್ 23ರಂದು ಮಸೀದಿ ಒಳಗಡೆ ಅಕ್ರಮವಾಗಿ ಮೂರ್ತಿಯನ್ನು ಸ್ಥಾಪಿಸಿರುವುದು ತಪ್ಪು, ಮಸೀದಿ ದ್ವಂಸ ಪ್ರಕರಣ ಒಂದು ಕ್ರಿಮಿನಲ್ ಕೃತ್ಯ, ಆರೋಪಿಗಳಿಗೆ ಶಿಕ್ಷೆಯಾಗಬೇಕು ಎಂಬುದನ್ನು ಒತ್ತಿ ಹೇಳಿದೆ ಎಂದು ಅವರು ಹೇಳಿದರು.


ಪೂಜಾ ಸ್ಥಳಗಳ ಕಾಯಿದೆ 1991 ಪ್ರಕಾರ 15 ಆಗಸ್ಟ್ 1947 ರಲ್ಲಿ ನೆಲೆಗೊಂಡಿರುವಂತೆ ಯಾವುದೇ ಪೂಜಾ ಸ್ಥಳಗಳನ್ನು ಪರಿವರ್ತಿಸಲು, ದಾಳಿ ಮಾಡಲು, ಧ್ವಂಸಗೊಳಿಸಲು, ಹಾನಿ ಮಾಡಲು ಯಾರಿಗೂ ಅನುಮತಿ ನೀಡುವುದಿಲ್ಲ. 2018 ರ ಶಬರಿಮಲೆ ತೀರ್ಪಿನ ವಿರುದ್ಧ ಪ್ರತಿಭಟನೆಗಳು ನಡೆದು ತೀರ್ಪನ್ನು ತಡೆಹಿಡಿಯಲಾಗಿತ್ತು. ಎಸ್.ಸಿ- ಎಸ್.ಟಿ ಕಾನೂನಿನ ವಿರುದ್ಧ ಹೋರಾಟದಲ್ಲಿ 11 ಜನ ಜೀವವನ್ನು ಕಳೆದುಕೊಂಡಿದ್ದರು. ತದ ನಂತರ ತೀರ್ಪನ್ನು ವಾಪಸು ಪಡೆಲಾಯಿತು. ದೆಹಲಿಯ ತುಘಲಕಾಬಾದ್ ನಲ್ಲಿ ರವಿದಾಸ ಮಂದಿರವನ್ನು ಒಡೆಯಲು ಸುಪ್ರೀಂ ಕೋರ್ಟ್ ತೀರ್ಪು ನೀಡಿತ್ತು. ವ್ಯಾಪಕ ಪ್ರತಿಭಟನೆ ನಡೆದ ಬಳಿಕ ತನ್ನ ತೀರ್ಪನ್ನು ಮರುಪರಿಶೀಲಿಸಿ ಮಂದಿರವನ್ನು ಪುನರ್ ನಿರ್ಮಿಸಲು ಆದೇಶ ನೀಡಿತು.
ಬಾಬರಿ ಮಸೀದಿ ದ್ವಂಸ ಅನ್ಯಾಯ ಎಂಬುದು ಸ್ಪಷ್ಟವಾದ್ದರಿಂದ ಮಸೀದಿ ಪುನರ್ ನಿರ್ಮಿಸಿ ನ್ಯಾಯ ಒದಗಿಸಬೇಕು ಎಂದು ಎಸ್.ಡಿ.ಪಿ.ಐ ಒತ್ತಾಯಿಸುತ್ತದೆ. ಪ್ರತಿಭಟನೆಯಲ್ಲಿ ಪಾಪ್ಯುಲರ್ ಫ್ರಂಟ್ ಆಫ್ ಇಂಡಿಯಾ ಜಿಲ್ಲಾಧ್ಯಕ್ಷ ಸೂಫಿ ಇಬ್ರಾಹಿಂ, ಕಾಸಿಂ ಫೈರೋಜ್ ಭಾಷಾ, ಹಾಸನ ವಿಧಾನಸಭಾ ಕ್ಷೇತ್ರ ಅಧ್ಯಕ್ಷ ಸರ್ದಾರ್ ಪಾಷ, ಕಾರ್ಯದರ್ಶಿ ಸೈಯದ್ ನದಿಮ್, ಮೌಲಾನಾ ನದಿಮ್ ಮತ್ತಿತರರು ಉಪಸ್ಥಿತರಿದ್ದರು.

Join Whatsapp