ಓಮಿಕ್ರಾನ್ : ಭಾರತ ಯಾವುದೇ ಪರಿಸ್ಥಿತಿಗೂ ಸಿದ್ಧವಿರಬೇಕು ಎಂದು ಎಚ್ಚರಿಸಿದ ಏಮ್ಸ್

Prasthutha|

ನವದೆಹಲಿ : ಕೋವಿಡ್ ವೈರಸ್ ನ ಹೊಸ ರೂಪಾಂತರ ಓಮಿಕ್ರಾನ್ ಸೋಂಕು ಎದುರಿಸಲು, ಬ್ರಿಟನ್ ನಲ್ಲಿ ಹೆಚ್ಚುತ್ತಿರುವ ಪ್ರಕರಣಗಳನ್ನು ಗಮನದಲ್ಲಿಟ್ಟುಕೊಂಡು ಭಾರತ ಯಾವುದೇ ಪರಿಸ್ಥಿತಿಗೂ ತನ್ನನ್ನು ತಾನು ಸಿದ್ಧಪಡಿಸಿಕೊಳ್ಳಬೇಕು ಎಂದು ದೆಹಲಿ ಏಮ್ಸ್ ಗಂಭೀರ ಎಚ್ಚರಿಕೆ ನೀಡಿದೆ.

- Advertisement -

ಓಮಿಕ್ರಾನ್ ರೂಪಾಂತರಿ ತಳಿ ಆರ್ಭಟದಿಂದ ಬ್ರಿಟನ್ ಮತ್ತು ಅಮೆರಿಕ ಸೇರಿದಂತೆ ಜಗತ್ತಿನ ಸಾಕಷ್ಟು ರಾಷ್ಟ್ರಗಳಲ್ಲಿ ದೈನಂದಿನ ಸೋಂಕು ಪ್ರಕರಣಗಳು ದಾಖಲೆ ಮಟ್ಟಕ್ಕೇರಿವೆ. ಜಗತ್ತಿನಲ್ಲಿ 90ಕ್ಕೂ ಅಧಿಕ ರಾಷ್ಟ್ರಗಳಲ್ಲಿ ಓಮಿಕ್ರಾನ್ ಸೋಂಕು ವೇಗವಾಗಿ ಹರಡುತ್ತಿದ್ದು, ಪ್ರಮುಖವಾಗಿ ಬ್ರಿಟನ್ ನಲ್ಲಿ ಪ್ರತಿ ನಿತ್ಯ ಸರಾಸರಿ 1 ಲಕ್ಷ ಹೊಸ ಸೋಂಕು ಪ್ರಕರಣಗಳು ವರದಿಯಾಗುತ್ತಿದೆ. ಹೀಗಾಗಿ ಬ್ರಿಟನ್ ಪರಿಸ್ಥಿತಿ ಗಮನದಲ್ಲಿಟ್ಟುಕೊಂಡು ಭಾರತವು ಯಾವುದೇ ಪರಿಸ್ಥಿತಿಗೂ ತನ್ನನ್ನು ತಾನು ಸಿದ್ಧಪಡಿಸಿಕೊಳ್ಳಬೇಕು ಎಂದು ಆಲ್ ಇಂಡಿಯಾ ಇನ್‌ಸ್ಟಿಟ್ಯೂಟ್ ಆಫ್ ಮೆಡಿಕಲ್ ಸೈನ್ಸಸ್ ನಿರ್ದೇಶಕ ಡಾ.ರಂದೀಪ್ ಗುಲೇರಿಯಾ ಹೇಳಿದ್ದಾರೆ.

ಮಾಧ್ಯಮದೊಂದಿಗೆ ಮಾತನಾಡಿದ ಅವರು, ” ಓಮಿಕ್ರಾನ್ ಬಗ್ಗೆ ಸ್ಪಷ್ಟ ಮಾಹಿತಿ ತಿಳಿಯಲು ನಮಗೆ ಇನ್ನು ಹೆಚ್ಚಿನ ದತ್ತಾಂಶಗಳು ಬೇಕು. ಪ್ರಪಂಚದ ಇತರೆ ಭಾಗಗಳಲ್ಲಿ ಪ್ರಕರಣಗಳಲ್ಲಿ ಉಲ್ಬಣವು ಕಂಡಗ, ನಾವು ಅದನ್ನು ನಿಕಟವಾಗಿ ಮೇಲ್ವಿಚಾರಣೆ ಮಾಡಬೇಕಾಗುತ್ತದೆ. ಹೀಗಾಗಿ ಯಾವುದೇ ಪರಿಸ್ಥಿತಿಗೂ ನಾವು ಸಿದ್ಧರಾಗಿರಬೇಕು. ಕಾವಲು ಇಲ್ಲದೆ ಸಿಕ್ಕಿಹಾಕಿಕೊಳ್ಳುವುದಕ್ಕಿಂತ ಹೋರಾಟಕ್ಕೆ ಸಿದ್ಧವಾಗಿರುವುದು ಉತ್ತಮ” ಎಂದು ಹೇಳಿದ್ದಾರೆ



Join Whatsapp