ಉದ್ಯೋಗ ನೀಡುವಂತೆ ಒತ್ತಾಯಿಸಿ ಒಮಾನ್ ನಲ್ಲಿ ಪ್ರತಿಭಟನೆ

Prasthutha|

ಸರಕಾರಿ ಮತ್ತು ಖಾಸಗಿ ಸಂಸ್ಥೆಯಲ್ಲಿ ಒಮಾನ್ ಪೌರರಿಗೆ ಉದ್ಯೋಗ ನೀಡಬೇಬೇಕೆಂದು ಮತ್ತು ಇನ್ನಿತರ ಕೆಲವೊಂದು ಬೇಡಿಕೆಗಳನ್ನಿಟ್ಟು ಒಮಾನ್‌‌ನ ಸೊಹಾರ್‌‌ನಲ್ಲಿ ಇಲ್ಲಿನ ನಾಗರಿಕರು ಬೀದಿಗಿಳಿದು ಪ್ರತಿಭಟನೆ ಮಾಡಿದ್ದಾರೆ.

- Advertisement -

ಆದರೆ ಒಮಾನ್ ಕಾನೂನಿನಡಿಯಲ್ಲಿ ರಸ್ತೆಗಳನ್ನು ನಿರ್ಬಂಧಿಸುವುದು, ಸಾರಿಗೆ ವಾಹನಗಳನ್ನು ವಶಪಡಿಸಿಕೊಳ್ಳುವುದು, ರಸ್ತೆಯಲ್ಲಿ ಚಲಿಸುವ ವಾಹನಗಳ ಮೇಲೆ ಮತ್ತು ಪಾದಾಚಾರಿಗಳ ಮೇಲೆ ಹಲ್ಲೆ ನಡೆಸುವುದು, ಸಾರ್ವಜನಿಕ ಮತ್ತು ಖಾಸಗಿ ಆಸ್ತಿಯನ್ನು ಹಾಳುಮಾಡವುದು ಶಿಕ್ಷಾರ್ಹ ಅಪರಾಧವಾಗಿದೆ. ಹೀಗಾಗಿ ಈ ಮೇಲಿನ ಅಪರಾಧಕ್ಕಾಗಿ ಪ್ರತಿಭಟನೆಯಲ್ಲಿದ್ದ ಕೆಲವು ಜನರನ್ನು ರಾಯಲ್ ಓಮನ್ ಪೊಲೀಸರು (ಆರ್‌ಒಪಿ) ಬಂಧಿಸಿದ್ದಾರೆ ಎಂದು ಬಲ್ಲ ಮೂಲಗಳಿಂದ ತಿಳಿದು ಬಂದಿದೆ.



Join Whatsapp