ಅವಧಿ ಮೀರಿದ ರೆಸಿಡೆಂಟ್ ಕಾರ್ಡ್‌ಗಳನ್ನು ನವೀಕರಿಸಲು ಅನುಮತಿ ನೀಡಿದ ಒಮಾನ್

Prasthutha|

ಒಮಾನ್‌: ಉದ್ಯೋಗದಾತರಿಗೆ ಅವಧಿ ಮೀರಿದ ರೆಸಿಡೆಂಟ್ ಕಾರ್ಡ್‌ಗಳನ್ನು ನವೀಕರಿಸಲು ಒಮಾನ್ ಅನುಮತಿಸಿದೆ.

- Advertisement -

2020ರ ಜೂನ್ 1ರಿಂದ 2021 ಡಿಸೆಂಬರ್ 30ರವರೆಗಿನ ಅವಧಿಯಲ್ಲಿ ರೆಸಿಡೆಂಟ್ ಕಾರ್ಡ್ ನವೀಕರಣಕ್ಕಾಗಿ ವಿಧಿಸಿದ ದಂಡವನ್ನು ಮನ್ನಾ ಮಾಡಲು ಸುಪ್ರೀಂ ಕಮಿಟಿ ನಿರ್ಧರಿಸಿದೆ. ಸಂಸ್ಥೆಗಳ, ಕಂಪನಿಗಳ, ವಾಣಿಜ್ಯ ರಿಜಿಸ್ಟರ್ ಗಳ, ಪರವಾನಗಿಗಳನ್ನು ನವೀಕರಿಸದಿದ್ದಕ್ಕಾಗಿ ವಿಧಿಸಿದ ದಂಡವನ್ನೂ ಮನ್ನಾ ಮಾಡಲಾಗಿದೆ. 2020 ಜೂನ್ 1ರಿಂದ 2021 ಡಿಸೆಂಬರ್ 31 ರವರೆಗೆ ದಂಡವಿಲ್ಲದೆ ಪರವಾನಗಿಗಳನ್ನು ನವೀಕರಿಸಬಹುದು.



Join Whatsapp