ಜಂತರ್ ಮಂತರ್ ಕೋಮು ಧ್ವೇಷಪೂರಿತ ಘೋಷಣೆ: ಆರೋಪಿ ಪ್ರೀತ್ ಸಿಂಗ್ ಗೆ ಜಾಮೀನು ನೀಡಿದ ದೆಹಲಿ ಹೈಕೋರ್ಟ್

Prasthutha|

ನವದೆಹಲಿ: ಇತ್ತೀಚೆಗೆ ದೆಹಲಿಯ ಜಂತರ್ ಮಂತರ್ ನಲ್ಲಿ ಮುಸ್ಲಿಮ್ ವಿರೋಧಿ ಘೋಷಣೆ ಕೂಗಿದ ಆರೋಪದಲ್ಲಿ ಬಂಧಿತರಾಗಿದ್ದ ಹಿಂದುತ್ವ ಸಂಘಟನೆಯ ಪ್ರೀತ್ ಸಿಂಗ್ ಗೆ ದೆಹಲಿ ಹೈಕೋರ್ಟ್ ಇಂದು ಜಾಮೀನು ಮಂಜೂರು ಮಾಡಿದೆ.

- Advertisement -

ಮುಸ್ಲಿಮ್ ಸಮುದಾಯವನ್ನು ಗುರಿಯಾಗಿಸಿ ಪ್ರಚೋದನಕಾರಿಯಾಗಿ ಘೋಷಣೆ ಕೂಗಿದ ಹಿನ್ನೆಲೆಯಲ್ಲಿ ಆತನ ಜಾಮೀನು ಅರ್ಜಿಯನ್ನು ಈ ಹಿಂದೆ ತಿರಸ್ಕರಿಸಲಾಗಿತ್ತು. ಪ್ರಸಕ್ತ ನಡೆದ ಬೆಳವಣಿಗೆಯಲ್ಲಿ ನ್ಯಾಯಮೂರ್ತಿ ಮುಕ್ತಾಮುಕ್ತಾ ಗುಪ್ತಾ ಅವರು ಆರೋಪಿ ಪ್ರೀತ್ ಸಿಂಗ್ ಗೆ ಜಾಮೀನು ಮಂಜೂರು ಮಾಡಿ ಆದೇಶ ನೀಡಿದ್ದಾರೆ.

ಹಿಂದುತ್ವವಾದಿಗಳ ಗುಂಪು ಆಯೋಜಿಸಿದ ಕಾರ್ಯಕ್ರಮದಲ್ಲಿ ಮುಸ್ಲಿಮ್ ಸಮುದಾಯದ ವಿರುದ್ಧ ನಿಂದನಾತ್ಮಕ ಮತ್ತು ಅವಹೇಳಕಾರಿ ಘೋಷಣೆ ಮೊಳಗಿಸಿದ ಕಾರಣ ಹಲವರ ವಿರುದ್ಧ 153 ಎ ಸೆಕ್ಷನ್ ಅಡಿಯಲ್ಲಿ ಪ್ರಕರಣ ದಾಖಲಿಸಿ ಬಂಧಿಸಿದ್ದರು.
ಆರೋಪಿಗಳ ಪರ ವಕೀಲ ವಿಷ್ಣು ಶಂಕರ್ ಜೈನ್ ನ್ಯಾಯಾಲಯದಲ್ಲಿ ವಾದಿಸಿದರು.

Join Whatsapp