ತೈಲ ಬೆಲೆಯಲ್ಲಿ ಮತ್ತೆ ಏರಿಕೆ: ಮಂಗಳೂರಿನಲ್ಲಿ ಶತಕ ಬಾರಿಸಿದ ಡೀಸೆಲ್ !

Prasthutha|

ಮಂಗಳೂರು: ಭಾರತದಲ್ಲಿ ಕಚ್ಚಾ ತೈಲ ಬೆಲೆಯು ದಿನದಿಂದ ದಿನಕ್ಕೆ ಏರಿಕೆಯಾಗುತ್ತಿದ್ದು, ಮಂಗಳೂರಿನಲ್ಲಿ ಇಂದು ಡೀಸೆಲ್ ಬೆಲೆ 100.35 ಏರುವ ಮೂಲಕ ಡೀಸೆಲ್ ಶತಕ ಬಾರಿಸಿದೆ.
ಹಾಗೆಯೇ ಕ್ರಮವಾಗಿ ಪೆಟ್ರೋಲ್ ಬೆಲೆ 109.45 ರೂ ಏರಿಕೆಯಾಗಿ ಜನರಿಗೆ ಮತ್ತಷ್ಟು ಹೊರೆ ಬಿದ್ದಿದೆ.

- Advertisement -

ಇನ್ನು ಬೆಂಗಳೂರಿನಲ್ಲಿ ಪೆಟ್ರೋಲ್ ಬೆಲೆ ಲೀಟರ್ ಗೆ 110 ರೂಪಾಯಿ ದಾಟಿದೆ. ದೆಹಲಿಯಲ್ಲಿ ಪೆಟ್ರೋಲ್ ಹಾಗೂ ಕ್ರಮವಾಗಿ 106.54 ರೂಪಾಯಿ ಮತ್ತು 95.27 ರೂಪಾಯಿ ಆಗಿದೆ. ಇನ್ನು ಮುಂಬೈನಲ್ಲಿ ಒಂದು ಲೀಟರ್ ಪೆಟ್ರೋಲ್ ದರ 112.44 ರೂಪಾಯಿ ಇದ್ದರೆ, ಡೀಸೆಲ್ ಲೀಟರ್ಗೆ 103.26 ರೂಪಾಯಿ ಇದೆ. ಚೆನ್ನೈನಲ್ಲಿ ಪೆಟ್ರೋಲ್ ಲೀಟರ್ 103.26 ರೂಪಾಯಿಗೆ ಮಾರಾಟ ಆಗುತ್ತಿದ್ದರೆ, ಡೀಸೆಲ್ 99.59 ರೂಪಾಯಿ ಇದೆ. ಹೈದರಾಬಾದ್ನಲ್ಲಿ ಪೆಟ್ರೋಲ್ 110.82, ಡೀಸೆಲ್ 103.94 ಇದೆ.



Join Whatsapp