ಲಾಕ್‌ ಡೌನ್‌ ನಿಯಮ ಜಾರಿಗೊಳಿಸುವ ವೇಳೆ ಅಂಗಡಿ ಮಾಲೀಕನ ಕಪಾಳಕ್ಕೆ ಹೊಡೆದ ಅಧಿಕಾರಿ | ವೀಡಿಯೊ ವೈರಲ್‌

Prasthutha|

ಭೋಪಾಲ್‌ : ಮಧ್ಯಪ್ರದೇಶದ ಶಾಜಾಪುರದಲ್ಲಿ ಕೊರೊನ ಲಾಕ್‌ ಡೌನ್‌ ಮಾರ್ಗಸೂಚಿ ಪಾಲಿಸುವ ನೆಪದಲ್ಲಿ ಚಪ್ಪಲಿ ಅಂಗಡಿ ಮಾಲಕನೊಬ್ಬರಿಗೆ ಅಲ್ಲಿ ಹೆಚ್ಚುವರಿ ಜಿಲ್ಲಾಧಿಕಾರಿ ಥಳಿಸಿದ ವೀಡಿಯೊವೊಂದು ವೈರಲ್‌ ಆಗಿದೆ. ಮಹಿಳಾ ಅಧಿಕಾರಿಯೊಬ್ಬರು ಅಂಗಡಿ ಮಾಲಕನಿಗೆ ಥಳಿಸುತ್ತಿರುವುದು ವೀಡಿಯೊದಲ್ಲಿ ಕಂಡು ಬಂದಿದೆ.  

- Advertisement -

ಆದಾಗ್ಯೂ ತಾನು ಬಾಗಿಲು ಹಾಕಿದ್ದೆ, ಪೊಲೀಸರು ಅದನ್ನು ಮೇಲೆತ್ತಿದ್ದರು. ಹೆಚ್ಚುವರಿ ಜಿಲ್ಲಾಧಿಕಾರಿಯವರು ನನಗೆ ಕಪಾಳಕ್ಕೆ ಹೊಡೆದರು ಮತ್ತು ಓರ್ವ ಪೊಲೀಸ್‌ ಲಾಠಿಯಿಂದಲೂ ಬಡಿದರು ಎಂದು ಥಳಿತಕ್ಕೊಳಗಾದ ಅಂಗಡಿ ಮಾಲೀಕ ಹೇಳಿದ್ದಾರೆ.

ಕೆಲವು ದಿನಗಳ ಹಿಂದೆ ಛತ್ತೀಸ್‌ ಗಢದಲ್ಲಿ ಜಿಲ್ಲಾಧಿಕಾರಿಯೊಬ್ಬರು ಲಾಕ್‌ ಡೌನ್ ನಿಯಮ ಉಲ್ಲಂಘಿಸಿದ ವ್ಯಕ್ತಿಯೊಬ್ಬರಿಗೆ ಥಳಿಸಿದ ವೀಡಿಯೊ ವೈರಲ್‌ ಆಗಿತ್ತು. ವೀಡಿಯೊ ವೈರಲ್‌ ಆದ ಬೆನ್ನಲ್ಲೇ ಛತ್ತೀಸ್‌ ಗಢ ಸಿಎಂ ಭೂಪೇಶ್‌ ಭಗೇಲ್‌ ಆ ಜಿಲ್ಲಾಧಿಕಾರಿ ವಿರುದ್ಧ ಕಠಿಣ ಕ್ರಮ ಕೈಗೊಂಡಿದ್ದರು.

- Advertisement -

Join Whatsapp