ಮಲ್ಲೂರು ಗ್ರಾಮ ಪಂಚಾಯತ್ PDO ಮೇಲೆ ಹಲ್ಲೆ ಪ್ರಕರಣ,ತಪ್ಪಿತಸ್ಥರನ್ನು ಕೂಡಲೇ ಬಂಧಿಸಿ,ಇದರ ಹಿಂದಿರುವ ಶಕ್ತಿಯನ್ನು ಬಯಲಿಗೆಳೆಯಲು ಎಸ್ಡಿಪಿಐ ಆಗ್ರಹ

Prasthutha|

ಮಲ್ಲೂರು ಗ್ರಾಮ ಪಂಚಾಯತ್ PDO ರಾಜೇಂದ್ರ ಶೆಟ್ಟಿ ರವರ ಮೇಲೆ ನಡೆದ ಹಲ್ಲೆಯನ್ನು ಎಸ್ಡಿಪಿಐ ಮಲ್ಲೂರು ಗ್ರಾಮ ಸಮಿತಿ ತೀವ್ರವಾಗಿ ಖಂಡಿಸುತ್ತದೆ.

- Advertisement -

ಈ ಘಟನೆ ಪೂರ್ವ ನಿಯೋಜಿತ ಕೃತ್ಯವಾಗಿದ್ದು ಪ್ರಸುತ್ತ ಇಲ್ಲಿ SDPI ಅಧಿಕಾರ ನಡೆಸುತ್ತಿರುವುದು ಮಾತ್ರವಲ್ಲ ಸಮಗ್ರ ಗ್ರಾಮದ ಅಭಿವೃದ್ಧಿಗೆ ಪರಿಶ್ರಮಿಸುತಿರುವ ಆಡಳಿತ ಪಕ್ಷದ ಹೆಸರಿಗೆ ಕಳಂಕವನ್ನುಂಟು ಮಾಡಲು ಕಾಣದ ಕೈಗಳು ಇದರಲ್ಲಿ ಕೆಲಸಮಾಡಿದೆ .ಆದುದರಿಂದ ಪೊಲೀಸ್ ಇಲಾಖೆ ತಪ್ಪಿತಸ್ಥ ಆರೋಪಿಗಳನ್ನು ಕೂಡಲೇ ಬಂಧಿಸಬೇಕು ಮತ್ತು ಇದರ ಹಿಂದಿರುವ ಶಕ್ತಿಯನ್ನು ಪತ್ತೆಹಚ್ಚಿ ಕಾನೂನಿನ ಮುಂದೆ ತರುವಂತೆ ಎಸ್ಡಿಪಿಐ ಮಲ್ಲೂರು ಗ್ರಾಮ ಪ ಸಮಿತಿ ಆಗ್ರಹಿಸುತ್ತದೆ ಎಂದು ಎಸ್ಡಿಪಿಐ ಮಲ್ಲೂರು ಗ್ರಾಮ ಪಂಚಾಯತ್ ಸಮಿತಿ ಕಾರ್ಯದರ್ಶಿ ಶಫೀಕ್ ಅವರು ಪ್ರಕಟನೆಯಲ್ಲಿ ತಿಳಿಸಿದ್ದಾರೆ.