ನ್ಯಾಯಾಧೀಶರಿಗೆ ಚಾಕುವಿನಿಂದ ಇರಿದ ಕಚೇರಿ ಸಹಾಯಕ ಸಿಬ್ಬಂದಿ !

Prasthutha|

ಚೆನ್ನೈ: ಕೋರ್ಟ್ ಕಚೇರಿಯ ಸಹಾಯಕ ಸಿಬ್ಬಂದಿಯೊಬ್ಬ ನ್ಯಾಯಾಧೀಶರಿಗೆ ಚಾಕುವಿನಿಂದ ಇರಿದಿರುವ ಘಟನೆ ಸೇಲಂನಲ್ಲಿ ನಡೆದಿದೆ.

- Advertisement -

ಪ್ರಕಾಶ್ ಬಂಧಿತ ಆರೋಪಿ ಎಂದು ಗುರುತಿಸಲಾಗಿದೆ.

ಪ್ರಕಾಶ್ ಬೇರೆ ಊರಿನಿಂದ ಜಿಲ್ಲಾ ನ್ಯಾಯಾಲಯಕ್ಕೆ ವರ್ಗಾವಣೆಗೊಂಡಿದ್ದಕ್ಕಾಗಿ ಅಸಮಾಧಾನಗೊಂಡು ನ್ಯಾಯಾಧೀಶರಿಗೆ ಚಾಕುವಿನಿಂದ ಇರಿದಿದ್ದಾನೆ. ಕೂಡಲೇ ಸ್ಥಳದಲ್ಲಿದ್ದ ಸಿಬ್ಬಂದಿ ನ್ಯಾಯಾಧೀಶರನ್ನು ಆಸ್ಪತ್ರೆಗೆ ದಾಖಲಿಸಿದ್ದಾರೆ. ಸದ್ಯ ಅವರ ಆರೋಗ್ಯ ಸ್ಥಿರವಾಗಿದೆ ಎಂದು ಪೊಲೀಸರು ಹೇಳಿದ್ದಾರೆ.

- Advertisement -

ತನ್ನ ವರ್ಗಾವಣೆ ಪ್ರಸ್ತಾವನೆಯನ್ನು ನಿರಾಕರಿಸಿದ್ದಕ್ಕೆ ನ್ಯಾಯಾಧೀಶ ಪೊನ್ಪಾಂಡಿಗೆ ಚಾಕುವಿನಿಂದ ಇರಿದಿರುವುದಾಗಿ ತನಿಖೆಯ ವೇಳೆ ಪ್ರಕಾಶ್ ತಪ್ಪೊಪ್ಪಿಕೊಂಡಿದ್ದಾನೆ.

ಹಸ್ತಂಪಟ್ಟಿ ಪೊಲೀಸರು ಪ್ರಕಾಶ್ ವಿರುದ್ಧ ಐಪಿಸಿ ಸೆಕ್ಷನ್ 307ರ ಅಡಿ (ಕೊಲೆ ಯತ್ನ) ಪ್ರಕರಣ ದಾಖಲಿಸಿದ್ದಾರೆ.

Join Whatsapp