ತಮ್ಮ ತೋಟದಲ್ಲಿ ಬೆಳೆದ ಮಾವಿನ ಹಣ್ಣಿನ ಚಿತ್ರಗಳನ್ನು ಎಲ್ಲೆಡೆ ಹಂಚಿಕೊಂಡ ಮಾಲೀಕ, ಮರುದಿನವೇ 2.5 ಲಕ್ಷ ಮೌಲ್ಯದ ಹಣ್ಣುಗಳು ಕಳವು

Prasthutha|

ಭುವನೇಶ್ವರ: ಮಾವು ಮಾರಾಟಕ್ಕಿದೆ ಎಂದು ಜಮೀನಿನ ಮಾಲೀಕರೊಬ್ಬರು ಸಾಮಾಜಿಕ ಜಾಲತಾಣಗಳಲ್ಲಿ ಹಣ್ಣಿನ ಫೋಟೊಗಳನ್ನು ಹಾಕಿದ್ದು, ಮರುದಿನವೇ 2.5 ಲಕ್ಷ ರೂಪಾಯಿ ಬೆಲೆಬಾಳುವ ಹಣ್ಣುಗಳ ಕಳ್ಳತನವಾದ ಘಟನೆ ಒಡಿಶಾದ ನುವಾಪಾಡಾ ಜಿಲ್ಲೆಯಲ್ಲಿ ನಡೆದಿದೆ.

- Advertisement -

ರೈತ ಲಕ್ಷ್ಮೀನಾರಾಯಣ ಎಂಬುವವರು ತಮ್ಮ ಜಮೀನಿನಲ್ಲಿ 38ಕ್ಕೂ ಹೆಚ್ಚು ಬಗೆಯ ಮಾವುಗಳನ್ನು ಬೆಳೆಸಿದ್ದರು. ಮಾವು ಬೆಳೆ ಉತ್ತಮವಾಗಿದೆ ಈ ಬಾರಿ ಒಳ್ಳೆಯ ಲಾಭ ಪಡೆಯಬಹುದು ಎನ್ನುವ ಹಂಬಲದಲ್ಲಿದ್ದರು. ಹೀಗಾಗಿ ಸಾಮಾಜಿಕ ಜಾಲತಾಣಗಳಲ್ಲಿ ಈ ಸುದ್ದಿ ಹಂಚಿಕೊಂಡಿದ್ದರು.

ಅಷ್ಟೇ ಅಲ್ಲದೆ ಮರದ ಫೋಟೊವನ್ನು ಕೂಡ ಹಾಕಿ ಈ ಮರದ ಹಣ್ಣುಗಳಿಗೆ ಮಾರುಕಟ್ಟೆಯಲ್ಲಿ ಉತ್ತಮ ಬೆಲೆ ಇದೆ ಎಂದೂ ಕೂಡ ಬರೆದಿದ್ದರು. ಇದನ್ನು ನೋಡಿದ ಕಳ್ಳರು ಅದೇ ಮರಗಳಿಂದ ಹಣ್ಣನ್ನು ಕದ್ದಿದ್ದಾರೆ.

- Advertisement -

ಒಂದೇ ದಿನದಲ್ಲಿ ಜಮೀನಿನಲ್ಲಿದ್ದ ನಾಲ್ಕು ಮರಗಳಲ್ಲಿನ ಹಣ್ಣನ್ನು ಖದೀಮರು ಕದ್ದು ಪರಾರಿಯಾಗಿದ್ದಾರೆ.



Join Whatsapp